ಅಂತರರಾಷ್ಟ್ರೀಯ

ಬ್ರೆಜಿಲ್ ನಲ್ಲಿ 24 ಗಂಟೆಗಳಲ್ಲಿ ಕರೋನ ಸೋಂಕಿಗೆ 1200 ಜನ ಬಲಿ

ಬ್ರೆಜಿಲ್ ನಲ್ಲಿ  24 ಗಂಟೆಗಳಲ್ಲಿ ಕರೋನ ಸೋಂಕಿಗೆ 1200  ಜನ ಬಲಿ

ರಿಯೊ ಡಿ ಜನೈರೊ, ಸೆಪ್ಟೆಂಬರ್ 2:  ಬ್ರೆಜಿಲ್ ನಲ್ಲಿ  ಕಳೆದ 24 ಗಂಟೆಗಳಲ್ಲಿ ಹೊಸದಾಗಿ  1,215 ಕರೋನ  ಸಾವುಗಳು ಮತ್ತು 42,659 ಹೊಸ ಸೋಂಕು ಪ್ರಕರಣಗಳು  ದಾಖಲಾಗಿದೆ  ಎಂದು  ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಸಾವಿನ ಸಂಖ್ಯೆ ಹಿಂದಿನ ದಿನಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಹಿಂದಿನ ದಿನ   553 ಸಾವುಗಳು ದಾಖಲಾಗಿತ್ತು ಎಂದೂ  ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ  3,950,931 ಕ್ಕೆ ಹಾಗೂ  ಸಾವಿನ ಸಂಖ್ಯೆ 122,596 ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ದೇಶದ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾದ ಸಾವೊ ಪಾಲೊ ರಾಜ್ಯದಲ್ಲಿ 814,375 ಪ್ರಕರಣಗಳು ಮತ್ತು 30,375 ಸಾವುಗಳು ವರದಿಯಾಗಿದೆ.  ರಿಯೊ ಡಿ ಜನೈರೊದಲ್ಲಿ   226,800 ಪ್ರಕರಣಗಳು ಮತ್ತು 16,217 ಸಾವುಗಳು ಸಂಭವಿಸಿವೆ ಎಂದು  ವರದಿಯಾಗಿದೆ. 

ಸುದ್ದಿ ಓದಿ