ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 100ರಷ್ಟು ಫಲಿತಾಂಶ
ಮೂಡಲಗಿ 12: ತಾಲೂಕಿನ ಕಲ್ಲೋಳಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ 100 ರಷ್ಟು ಆಗಿದೆ ಎಂದು ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಗಂಗರಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದಾರೆ
ಪರೀಕ್ಷೆ ಬರೆದ 58 ವಿದ್ಯಾರ್ಥಿಗಳಲ್ಲಿ 57 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು 24 ವಿದ್ಯಾರ್ಥಿಗಳು, ಇಂಗ್ಲೀಷದಲ್ಲಿ 100ಕ್ಕೆ 100 ಅಂಕಗಳನ್ನು 3 ವಿದ್ಯಾರ್ಥಿಗಳು, ಹಿಂದಿಯಲ್ಲಿ 20 ವಿದ್ಯಾರ್ಥಿಗಳು, ಗಣಿತದಲ್ಲಿ 5 ವಿದ್ಯಾರ್ಥಿಗಳು, ಸಮಾಜ ವಿಜ್ಞಾನದಲ್ಲಿ 43 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ಶಾಲೆಗೆ ಪೂಜಾ ಗಂಗನ್ನವರ 622 ಶೇ.99.52 ಪ್ರಥಮ ಸ್ಥಾನ, ಚೇತನ ಕುಳ್ಳೂರ ಮತ್ತು ವಿಶ್ವನಾಥ ಜಗ್ಗಿನವರ 620 ಶೇ.99.20 ದ್ವಿತೀಯ ಸ್ಥಾನ, ಲಕ್ಷ್ಮೀ ಕುದರಿ, ಮೇಘಾ ಮುರಗೋಡ, ರೂಪಾ ಹುಲಕುಂದ 619 ಶೇ.99.04 ಅಂಕ ಪಡೆದು ತೃತೀಯ ಸ್ಥಾನ ಪಡೆದು ಕೊಂಡಿದಾರೆ.
ರಾಜ್ಯದ ಎಲ್ಲ ವಸತಿ ಶಾಲೆಗಳಲ್ಲಿ ಕಲ್ಲೋಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡಿದು. 625ಕ್ಕೆ 600ಕಿಂತ ಅಧಿಕ ಅಂಕಗಳನ್ನು 44 ವಿದ್ಯಾರ್ಥಿಗಳು ಪಡೆದುಕೊಂಡಿದಾರೆ.
ಎಲ್ಲ ವಿದ್ಯಾರ್ಥಿಗಳನ್ನು ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ವಸತಿ ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಗಂಗರಡ್ಡಿ ಮತ್ತು ಶಾಲೆ ಉಪನ್ಯಾಷಕರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದಾರೆ.