ಶಿವಬೋಧರಂಗ ಕೃಷಿ ಪತ್ತಿನ ಸಂಘಕ್ಕೆ ರೂ. 10.76 ಲಕ್ಷ ಲಾಭ
ಮೂಡಲಗಿ 27: ಪಟ್ಟಣದ ಶಿವಬೋಧರಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕಳೆದ ಮಾರ್ಚ ಅಂತ್ಯಕ್ಕೆ 10.76 ಲಕ್ಷ ರೂಪಾಯಿ ಲಾಭಗಳಿಸಿ ಪ್ರಗತಿ ಪಥದತ ಸಾಗಿದೆ ಎಂದು ಸಂಘದ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ತಿಳಿಸಿದರು.
ಗುರುವಾರದಂದು ಶಿವಬೋಧರಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22 ಸಾಲಿನ ಪ್ರಗತಿ ನೋಟದ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು ಸಂಘವು ಕಡಿಮೆ ಅವಧಿಯಲ್ಲಿ ಒಟ್ಟು 498 ಶೇರುದಾರಿಂದ 35.24 ಲಕ್ಷ ಶೇರು ಹಣ ಹೊಂದಿದ್ದು, ಸಂಘದ 207 ರೈತ ಸದಸ್ಯರಿಗೆ ಬಿಡಿಸಿಸಿ ಬ್ಯಾಂಕ ಮುಖಾಂತರ 2.13 ಕೋಟಿ ರೂಪಾಯಿ ಸಾಲ ವಿತರಿಸಿದೆ. ಮಾರ್ಚ ಅಂತ್ಯಕ್ಕೆ 10.76 ಲಕ್ಷ ರೂಪಾಯಿ ನಿವಳ ಲಾಭಗಳಿಸಿದ್ದು, ಶೀಘ್ರಲ್ಲಿಯೇ ಸಂಘಕ್ಕೆ ನಿವೇಶನ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು, ಸಂಘದ ಸದಸ್ಯರಿಗೆ ಟ್ರ್ಯಾಕ್ಟರ್ ಸಾಲ ಮತ್ತು ರೈತರಿಗೆ ಗೊಬ್ಬರ ವಿತರಣೆ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದರು.
ಸಂಘದ ಸದಸ್ಯರಿಗೆ ಮತ್ತು ಪಟ್ಟಣದ ನಾಗರಿಕರಿಗೆ ಅನೂಕೂಲ ದೃಷ್ಟಿಯಿಂದ ಕಳೆದ ಸಾಲಿನಿಂದ ಗ್ರಾಹಕರ ಆಹಾರ ಪಡಿತರ ಸೇವಾ ಕೇಂದ್ರವನ್ನು ಆರಂಭಿಸಲಾಗಿದೆ ಎಂದರು. ಸಂಘವು ಪ್ರಗತಿ ಪಥದತ ಸಾಗಲು ಸಂಘದ ಗ್ರಾಹಕರು ಸಮಯಕ್ಕೆ ಸರಿಯಾಗಿ ವ್ಯವಹಾರ ನಡೆಸಿದ್ದು ಸಹಕಾರಿಯಾಗಿದೆ ಎಂದರು.
ಈ ಸಮಯದಲ್ಲಿ ಬಿಡಿಸಿಸಿ ಬ್ಯಾಂಕ್ ನೀರೀಕ್ಷಕ ವೀರಣ್ಣಾ ಢವಳೇಶ್ವರ, ಸಂಘದ ಉಪಾಧ್ಯಕ್ಷ ಸದಾಶಿವ ಹ.ತಳವಾರ, ನಿರ್ದೇಶಕರಾದ ವೆಂಕಟೇಶ ರಾ.ಸೋನವಾಲ್ಕರ, ಬಸವರಾಜ ಭೀ.ಕುರಬಗಟ್ಟಿ, ಸಚೀನ ಗೋ.ಸೋನಾವಾಲಕರ, ವಿನೋದ ಕೃ.ಪಾಟೀಲ, ರವೀಂದ್ರ ಯ.ಶಾಬನ್ನವರ, ಸುಭಾಸ ಯ.ಸಣ್ಣಕ್ಕಿ, ವೀರಣ್ಣ ಬ.ಸೋನವಾಲ್ಕರ, ಶಾಂತವ್ವಾ ಲ.ಶಾಬ್ನವರ, ಪದ್ಮಾವತಿ ಮ.ಲಂಕೆಪ್ಪನವರ ಮತ್ತಿತರರು ಇದ್ದರು.
ಸಂಘದ ಕಾರ್ಯನಿರ್ವಾಹಕ ಅಶೋಕ ಮಹಾರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿನೋದ ಪಾಟೀಲ ನಿರೂಪಿಸಿದರು. ವಿಶಾಲ ಜಾಧವ ವಂದಿಸಿದರು.