ಇಸ್ರೇಲ್ ನಲ್ಲಿ 1,465 ಹೊಸ ಕರೋನ ಪ್ರಕರಣ ವರದಿ
ಜೆರುಸಲೆಮ್, ಆಗಸ್ಟ್ 30: ಇಸ್ರೇಲ್‌ನಲ್ಲಿ ಹೊಸದಾಗಿ , 1,465 ಹೊಸ ಪ್ರಕರಣಳು ದಾಖಲಾಗಿದ್ದು ಪರಿಣಾಮ ದೇಶದಲ್ಲಿ ಕರೊನ ಸೋಂಕಿತರ ಸಂಖ್ಯೆ 113,465 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
12 ಹೊಸ ಸಾವುನೋವು ವರದಿಯಾದ ನಂತರ ಸಾವಿನ ಸಂಖ್ಯೆ 906 ಕ್ಕೆ ಏರಿದರೆ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಸಂಖ್ಯೆ 414 ರಿಂದ 438 ಕ್ಕೆ ಏರಿಕೆಯಾಗಿದೆ.
1,053 ರೋಗಿಗಳು ಚೇತರಿಸಿಕೊಂಡಿದ್ದು ಇದುವರೆಗೆ ಹೊಸ ಚೇತರಿಕೆಯ ಸಂಖ್ಯೆ 92,104 ಕ್ಕೆ ಏರಿಕೆಯಾಗಿದೆ.ಮತ್ತು , ಸಕ್ರಿಯ ಪ್ರಕರಣಗಳ ಸಂಖ್ಯೆ 20,455 ಕ್ಕೆ ಏರಿದೆ ಎಂದೂ ಆರೋಗ್ಯ ಸಚಿವಾಲಯ ಹೇಳಿದೆ.