ಮೂಡಲಗಿ

ನೂತನ ಎಸ್ಡಿಎಮ್ಸಿ ಸದಸ್ಯರಿಗೆ ಸತ್ಕಾರ

ನೂತನ ಎಸ್ಡಿಎಮ್ಸಿ ಸದಸ್ಯರಿಗೆ ಸತ್ಕಾರ

ಲೋಕದರ್ಶನ ವರದಿ

ಗುರ್ಲಾಪೂರ 18: ಸ್ಥಳಿಯ ಸರಕಾರಿ ಪ್ರೌಢಶಾಲೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಆಡಳಿತ ಮಂಡಳಿ ಸದಸ್ಯರಿಗೆ ಇತ್ತೀಚಿಗೆ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಶಾಲೆಯ ಪ್ರಧಾನ ಗುರುಮಾತೆ ಗೀತಾ ಕರಗಣ್ಣಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.

 ಅಧ್ಯಕ್ಷರಾಗಿ ರಾಮಪ್ಪ ಎನ್ ಹಳ್ಳೂರ, ಉಪಾಧ್ಯಕ್ಷರಾಗಿ ರೇವಪ್ಪ ಸಿ ಸತ್ತಿಗೇರಿ, ಸದಸ್ಯರಾಗಿ. ಮಹಾಲಿಂಗ ಮುಗಳಖೋಡ, ಮಹಾಲಿಂಗ ಶಿವಾಪೂರ, ಲಕ್ಷ್ಮಣ ಹಳ್ಳೂರ, ಅಶೋಕ ಮುಗಳಖೋಡ, ಶೈಲಾ ಪ ಗಾಣಿಗೇರ, ರೂಪಾ ನಾ ಕದಮ, ಸುನಿತಾ ಗಾಡಿವಡ್ಡರ ಆಯ್ಕೆಯಾಗಿದ್ದಾರೆ ಎಂದು ಗೀತಾ ಕರಗಣ್ಣಿ ಹೇಳಿದರು. ಸದಸ್ಯರನ್ನು ಸತ್ಕರಿಸಿ ಮಾತನಾಡುತ್ತಾ ಎಲ್ಲರೂ ಶಾಲೆಯ ಅಭಿವೃದ್ಧಿಗಾಗಿ ಕೆಲಸ ಮಾಡೋಣವೆಂದು ಹೇಳಿದರು.

ಸಕಾರದ ಆದೇಶದಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶೇಷ ಕಾಳಜಿಯಿಂದ ನಮ್ಮಶಾಲೆಯ ಅಬಿವೃದ್ಧಿ ಕೆಲಸಗಳಿಗೆ ಸಲಹೆ ಸೂಚನೆಗಳೊಂದಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ನಮ್ಮನ್ನು ಎಸ್ಡಿಎಮ್ಸಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ನಾವು ಶಾಸಕರಿಗೆ ಹಾಗೂ ನಮ್ಮನ್ನು ಕರೆದು ಸತ್ಕಾರ ಮಾಡಿದ ಶಾಲೆಯ ಎಲ್ಲ ಶಿಕ್ಷಕವೃಂದಕ್ಕೂ ಹಾಗೂ ಉರಿನ ಗುರು ಹಿರಿಯರಿಗೂ ಕೃತಜ್ಞರಾಗಿರೋಣ ಎಂದು ರೇವಪ್ಪ ಸತ್ತಿಗೇರಿ ತಿಳಿಸಿದರು.

ನಾಗಪ್ಪ ಹಳ್ಳೂರ, ಮಹಾದೇವ ರಂಗಾಪೂರ, ರಾಮಪ್ಪ ನೇಮಗೌಡರ, ಮಲ್ಲಿಕಾರ್ಜುನ ಮುಗಳಖೋಡ, ರುದ್ರಯ್ಯಾ ಹಿರೇಮಠ, ಶಿವಾನಂದ ಹಿರೇಮಠ, ಬಸವರಾಜ ಕುಲಗೊಡ, ಹನಮಂತ ಮತ್ತು ಖಾನಟ್ಟಿ ಗ್ರಾಮ ಪಂಚಾಯಿತಿ ಸದಸ್ಯರು, ಉರಿನ ಗುರುಹಿರಿಯರು ಶಿಕ್ಷಕರು ಉಪಸ್ಥಿತರಿದ್ದರು 

ಸುದ್ದಿ ಓದಿ