ಭವಿಷ್ಯದ ಜನಾಂಗಕ್ಕೆ ಉತ್ತಮ ಪರಿಸರ ನಿರ್ಮಿಸಬೇಕಾಗಿದೆ - ಇಂಗಳಗಿ
We need to create a better environment for future generations - Ingalagi
ಭವಿಷ್ಯದ ಜನಾಂಗಕ್ಕೆ ಉತ್ತಮ ಪರಿಸರ ನಿರ್ಮಿಸಬೇಕಾಗಿದೆ - ಇಂಗಳಗಿ
ರಾಣೇಬೆನ್ನೂರು 27: ಭವಿಷ್ಯದ ಜನಾಂಗಕ್ಕೆ ಇಂದಿನಿಂದಲೇ ಪರಿಪೂರ್ಣ ಹಸಿರಿನಿಂದ ಕೂಡಿರುವ ಉತ್ತಮ ಪರಿಸರವನ್ನು ನಿರ್ಮಿಸಬೇಕಾದ ಹೊಣೆ ಪ್ರತಿಯೊಬ್ಬರ ಮೇಲಿದೆ ಎಂದು ನಗರಸಭೆ ಪೌರಾಯುಕ್ತ ಫಕ್ಕೀರ್ಪ ಇಂಗಳಗಿ ಹೇಳಿದರು. ಮಾರುತಿ ನಗರ ವಲಯ ಕಾರ್ಯಕ್ಷೇತ್ರದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಾಣಿಜ್ಯ ನಗರ ರಾಣೇಬೆನ್ನೂರು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತದೆ. ರಾಜ್ಯದಲ್ಲಿಯೇ ಮಾದರಿ ನಗರ ಇದಾಗಿದ್ದು, ಮುಂದಿನ ದಿನಮಾನಗಳಲ್ಲಿ ಉತ್ತಮ ಮತ್ತು ಸುಂದರ ಪರಿಸರ ನಿರ್ಮಿಸುವ ಗುರಿ ಹೊಂದಲಾಗಿದೆ ಪ್ರತಿಯೊಬ್ಬ ನಾಗರಿಕರು, ನಗರಸಭೆ ಮತ್ತು ಎಸ್. ಕೆ. ಡಿ. ಆರ್. ಡಿ. ಪಿ, ಜೊತೆಗೆ ಕೈಜೋಡಿಸಬೇಕು ಎಂದು ಕೋರಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಬಿಸಿ ಟ್ರಸ್ಟ್ ಯೋಜನಾಧಿಕಾರಿ, ಮಂಜುನಾಥಗೌಡ ಅವರು ತಮ್ಮ ಯೋಜನೆ ವತಿಯಿಂದ ಈಗಾಗಲೇ 1000 ಸಾವಿರ ಸಸಿಗಳನ್ನು ನಾಟಿ ಮಾಡುವ ಗುರಿ ಹೊಂದಲಾಗಿದೆ. ಒಟ್ಟು 10 ವಿಭಾಗಗಳಲ್ಲಿ ಸಸಿಗಳನ್ನು ನೆಡುವುದರ ಮೂಲಕ, ಆಯಾ ಪ್ರದೇಶಗಳಲ್ಲಿ ಪಾಲನೆ ಪೋಷಣೆ, ಮತ್ತು ಸಮಾಜದ ಜವಾಬ್ದಾರಿ ಕುರಿತಂತೆ ಪರಿಸರ ಅರಿವು ಜಾಗೃತಿ ಮೂಡಿಸಲಾಗುತ್ತಿದೆ ಅದಕ್ಕಾಗಿ ಯೋಜನೆಯ ಪರಿಪೂರ್ಣತೆಗೆ ನಾಗರಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ವಾರ್ಡಿನ ಸದಸ್ಯ, ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಪರಿಸರ ಅರಿವು ಇಂದಿನ ಅಗತ್ಯವಾಗಿದ್ದು, ಸಸಿಗಳನ್ನು ನೆಟ್ಟ ಮಾತ್ರಕ್ಕೆ ಘೋಷಣೆ ಸಾಧ್ಯವಿಲ್ಲ. ಇದರ ರಕ್ಷಣೆಗೆ ಆಯಾ ಪ್ರದೇಶದಲ್ಲಿರುವ ನಾಗರಿಕರು, ನಿತ್ಯ ಗಮನಿಸಿ, ತಮ್ಮ ಮಕ್ಕಳಂತೆ ಪೋಷಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಆ ಭಾಗದ ಮುಖಂಡರಾದ ಇಸ್ಮಾಯಿಲ್ ಸಾಬ್ ಮಕಾಂದಾರ, ಲೀಯಾ ಖತ್ ಕಿಲ್ಲೇದಾರ, ಒಕ್ಕೂಟದ ಅಧ್ಯಕ್ಷ ಶ್ರೀಮತಿ ಶಕುಂತಲಾ ಬಡಿಗೇರ, ಕೃಷಿ ಮೇಲ್ವಿಚಾರಕ ಮಹಾಂತೇಶ್ ಎಂ. ಡಿ. ವಲಯ ಮೇಲ್ವಿಚಾರಕಿ ಶ್ರೀಮತಿ ಲಕ್ಷ್ಮಿ ವಿ, ಸೇವಾ ಪ್ರತಿನಿಧಿ ಶ್ರೀಮತಿ ಶಿವಲೀಲಾ, ಶ್ರೀಮತಿ ಭೂಮಿಕಾ, ಸೇರಿದಂತೆ ಸ್ಥಳೀಯ ಅನೇಕ ಗಣ್ಯರು, ನಾಗರಿಕರು ಸ್ವಸಹಾಯ ಸಂಘದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 