ಗದಗ-ಬೆಟಗೇರಿ ಅವಳಿ ನಗರಗಳಿಗೆ ನೀರು ಪೂರೈಕೆ ವಾಲ್ಮನ್ಗಳ ಮೇಲಿದೆ- ಎಚ್‌ಕೆಪಿ
Water supply to Gadag-Betageri twin cities is on hold - HKP
ಗದಗ-ಬೆಟಗೇರಿ ಅವಳಿ ನಗರಗಳಿಗೆ ನೀರು ಪೂರೈಕೆ ವಾಲ್ಮನ್ಗಳ ಮೇಲಿದೆ- ಎಚ್‌ಕೆಪಿ
ಗದಗ 29 : ಗದಗ-ಬೆಟಗೇರಿ ಅವಳಿ ನಗರದ ಸಮರ್ಕ ನೀರಿನ ಪೂರೈಕೆಗೆ ವಾಲ್ಮನ್ಗಳ ಪಾತ್ರ ಮಹತ್ವಪೂರ್ಣವಾಗಿದ್ದು, ಅವರ ಕರ್ತವ್ಯ ನಿಷ್ಠೆಯ ಮೇರೆಗೆ ನಗರಗಳಿಗೆ ಸಮರ್ಕ ನೀರಿನ ವ್ಯವಸ್ಥೆ ಸಾಧ್ಯವಿದೆ ಎಂದು ಸಚಿವ ಎಚ್.ಕೆ. ಪಾಟೀಲ ಅವರು ನಂಬಿಕೆ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ನೀರು ಸರಬರಾಜು ಕುರಿತ ನಡೆದ ಮಹತ್ವದ ಸಭೆಯಲ್ಲಿ ಅವರು ಮಾತನಾಡುತ್ತಾ, “ನಾವು ವಾಲ್ಮನ್ಗಳ ಮೇಲೆ ವಿಶ್ವಾಸವಿಟ್ಟಿದ್ದೇವೆ. ಅವರು ಮುಂದಿನ 100 ದಿನಗಳೊಳಗೆ ಸಮರ್ಕ ನೀರಿನ ಪೂರೈಕೆ ಮಾಡಲು ಶ್ರಮಿಸಲಿದ್ದಾರೆ” ಎಂದು ಹೇಳಿದರು. ಪ್ರತಿದಿನ ರಾತ್ರಿ ನದಿಯಿಂದ ಜಾಕ್ವೆಲ್ ಮೂಲಕ ಟ್ಯಾಂಕಿಗೆ ನೀರು ಸಂಗ್ರಹಿಸಿ ಮುಂಜಾನೆ ವಾರ್ಡ್ವಾರು ಪೂರೈಕೆಗೆ ವಾಲ್ಮನ್ಗಳು ಸಜ್ಜಾಗಬೇಕು ಎಂದು ಅವರು ಸೂಚಿಸಿದರು.ಸದ್ಯದ ವಾಲ್ಮನ್ಗಳ ಕಾರ್ಯವೈಖರಿ ಮತ್ತಷ್ಟು ಪರಿಣಾಮಕಾರಿಯಾಗಲು ಅವರ ನಿಯೋಜನೆಗಳನ್ನು ಮರುಹಂಚಿಕೆ ಮಾಡಬೇಕು. ವಾರ್ಡ್ಗಳಿಗೆ ಪ್ರತ್ಯೇಕವಾಗಿ ಅವರಿಗೆ ಹೊಣೆಗಾರಿಕೆ ನೀಡುವ ಮೂಲಕ ನಿಖರ ನೀರಿನ ವಿತರಣೆಗೆ ಪೌರಾಯುಕ್ತರು ಕ್ರಮ ಕೈಗೊಳ್ಳಬೇಕು ಎಂದರು.ವಾಲ್ಮನ್ಗಳ ಮೇಲ್ವಿಚಾರಣೆಗಾಗಿ ಸೂಪರ್ವೈಸರ್ಗಳ ನಿಯೋಜನೆಯಲ್ಲೂ ಬದಲಾವಣೆ ಅಗತ್ಯವಿದೆ. ಇದರೊಂದಿಗೆ ಪೈಪ್ಗಳು ಹಾಗೂ ವಾಲ್ಗಳಿಂದ ಪೊಲಾಗುತ್ತಿರುವ ನೀರಿನ ನಷ್ಟವನ್ನು ತಡೆಯಲು ತಕ್ಷಣ ದುರಸ್ತಿಗೆ ಸೂಚನೆ ನೀಡಲಾಯಿತು.ಸಚಿವರು ನವೆಂಬರ್ 1ರಂದು ಮತ್ತೊಮ್ಮೆ ನಾವೇಲ್ಲರೂ ಸೇರೋಣ. ಆ ವೇಳೆಗೆ ನೀರಿನ ಸಮಸ್ಯೆ ಪೂರ್ಣವಾಗಿ ಬಗೆಹರಿಯಬೇಕು ಎಂಬ ತೀವ್ರ ಸೂಚನೆಯನ್ನು ನೀಡಿದರು.ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಪ್ರಭು ಬುರುಬುರೆ, ಸಿದ್ದು ಪಾಟೀಲ, ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ಅಧಿಕಾರಿ ರೋಹನ್ ಜಗದೀಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ, ಪೌರಾಯುಕ್ತ ರಾಜಾರಾಮ್ ಪವಾರ್, ಇತರ ಅಧಿಕಾರಿಗಳು, ವಾಲ್ಮನ್ಗಳು ಮತ್ತು ಸೂಪರ್ವೈಸರ್ಗಳು ಉಪಸ್ಥಿತರಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 