ಅಂತರರಾಷ್ಟ್ರೀಯ

ಇಂಡೋನೇಷ್ಯಾ ಭೂಕುಸಿತದಲ್ಲಿ ಐವರ ಸಾವು

ಇಂಡೋನೇಷ್ಯಾ  ಭೂಕುಸಿತದಲ್ಲಿ ಐವರ ಸಾವು

ಮಾಸ್ಕೋ, ಫೆಬ್ರವರಿ 25: ಇಂಡೋನೇಷ್ಯಾದ ಮಧ್ಯ ಸುಲಾವೆಸಿಯಲ್ಲಿ ಭೂಕುಸಿತ ದುರಂತದಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 70 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಸಂಸ್ಥೆ  ಹೇಳಿದೆ. ಸಂಸ್ಥೆಯ ಮುಖ್ಯಸ್ಥ ದತು ಪಾಮುಸು ಟೊಂಬೊಲೊಟುಟು ಗುರುವಾರ ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ಈ ವಿಷಯ ತಿಳಿಸಿದ್ದಾರೆ. ಪರಿಗಿ ಪರ್ವತ ಜಿಲ್ಲೆಯ ಬುರಂಗಾ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ಸದ್ಯ ಐದು ದೇಹಗಳನ್ನು ವಶಪಡಿಕೊಳ್ಳಲಾಗಿದೆ.  ಕಾಣೆಯಾದವರ ಬಗ್ಗೆ ಕುಟುಂಬಗಳ ಸದಸ್ಯರಿಂದ ವರದಿ ಸ್ವೀಕರಿಸಲಾಗಿದೆ ಎಂದು ಅಧಿಕಾರಿಗಳು  ಹೇಳಿದ್ದು,  ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 


ಸುದ್ದಿ ಓದಿ