ಅಂತರರಾಷ್ಟ್ರೀಯ

ವಿಮಾನ ಹತ್ತುವಾಗ ಮೆಟ್ಟಿಲುಗಳ ಮೇಲೆ ಜಾರಿ ಬಿದ್ದ ಬೈಡನ್

ವಿಮಾನ  ಹತ್ತುವಾಗ  ಮೆಟ್ಟಿಲುಗಳ ಮೇಲೆ ಜಾರಿ ಬಿದ್ದ  ಬೈಡನ್

ವಾಷಿಂಗ್ಟನ್,  ಮಾ 20 :  ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ (78) ಅವರು ಏರ್ ಫೋರ್ಸ್ ಒನ್‌  ವಿಮಾನ   ಹತ್ತುವ  ಸಮಯದಲ್ಲಿ   ಮೆಟ್ಟಿಲುಗಳ ಮೇಲೆ ಜಾರಿಬಿದ್ದಿದ್ದಾರೆ.  ಶ್ವೇತಭವನದಿಂದ  ಅಟ್ಲಾಂಟಕ್ಕೆ ತೆರಳುತ್ತಿದ್ದ  ಸಮಯದಲ್ಲಿ  ಈ ಘಟನೆ  ನಡೆದಿದೆ.  ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಂತರ ಏರ್ ಫೋರ್ಸ್ ಒನ್ ವಿಮಾನ ಹತ್ತಿದ ಜೋ ಬೈಡನ್, ಮೆಟ್ಟಿಲುಗಳನ್ನು ಹತ್ತುವಾಗ ಸತತವಾಗಿ ಮೂರು ಬಾರಿ ಜಾರಿ ಬಿದ್ದರು.   ಈ ಘಟನೆಯಲ್ಲಿ ಅವರಿಗೆ ಯಾವುದೇ  ಅಪಾಯವಾಗದ   ಕಾರಣ ಭದ್ರತಾ ಸಿಬ್ಬಂದಿ ನಿಟ್ಟಿಸಿರು ಬಿಟ್ಟಿದ್ದಾರೆ. 


ಸುದ್ದಿ ಓದಿ