ಅಮೆರಿಕಾದಿಂದ ಭಾರತಕ್ಕೆ ತುರ್ತು ಸರಕು ತುಂಬಿದ ಹಡಗು ತೆರಳಲಿದೆ: ಶೀಲಾ ಜಾಕ್ಸನ್
ಹೂಸ್ಟನ್ ಮೇ 6: ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯಿಂದ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಭಾರತಕ್ಕೆ ತುರ್ತು ವೈದ್ಯಕೀಯ ನೆರವು ಕಲ್ಪಿಸಲು ಅಮೆರಿಕಾ, ಸರಕು ತುಂಬಿದ ಹಡಗನ್ನು ಕಳುಹಿಸುವ ಸಾಧ್ಯತೆಯಿದೆ ಎಂದು ಅಮೆರಿಕಾ ಶಾಸನ ಸಭಾ ಸದಸ್ಯೆ ಶೀಲಾ ಜಾಕ್ಸನ್ ಲೀ ಟ್ವಿಟರ್ ನಲ್ಲಿ ತಿಳಿಸಿದ್ದಾರೆ. "ಭಾರತಕ್ಕೆ ಮಾನವೀಯ ನೆರವು ಘೋಷಿಸಿದ್ದೇವೆ. ಭಾರತಕ್ಕೆ ತುರ್ತು ವೈದ್ಯಕೀಯ ಸರಕು ಹೊತ್ತ ಹಡಗು ಕಳುಹಿಸಲು ಪ್ರಸ್ತಾಪಿಸಿದ್ದೇವೆ. ಭಾರತದಲ್ಲಿ ಪರಿಸ್ಥಿತಿ ಶೋಚನೀಯವಾಗಿದೆ. ಭಾರತಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಸಹಾಯ ಮಾಡಲು ನಾವು ಒಟ್ಟಾಗಿ ಕೆಲಸ ಮಾಡುತ್ತೀದ್ದೇವೆ ”ಎಂದು ಅವರು ಟ್ವೀಟ್ ಮಾಡಿದ್ದಾರೆ.
ಶೀಲಾ ಜಾಕ್ಸನ್ ಬುಧವಾರ ಹೂಸ್ಟನ್ನ ಯುನೈಟೆಡ್ ಮೆಮೋರಿಯಲ್ ಮೆಡಿಕಲ್ ಸೆಂಟರ್ ನಿಂದ ಭಾರತಕ್ಕೆ ತುರ್ತು ಅಗತ್ಯವಾಗಿರುವ ಪರಿಕರಗಳನ್ನು ರವಾನಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಮೆರಿಕಾ ಕಾಂಗ್ರೆಸ್ ಮಹಿಳಾ ಸದಸ್ಯೆ ಕ್ಯಾಥರೀನ್ ಕ್ಲಾರ್ಕ್, "ಭಾರತದಲ್ಲಿ ಬಿಕ್ಕಟ್ಟನ್ನು ತಡೆಗಟ್ಟಲು ಅಮೆರಿಕಾ ಎಷ್ಟು ಸಾಧ್ಯವೋ ಅಷ್ಟು ಶ್ರಮಿಸಬೇಕು. ಇದಲ್ಲದೆ, ಈ ಮಾರಕ ಸೋಂಕು ಪ್ರಸರಣ ತಡೆಯಲು ವಿಶ್ವದಾದ್ಯಂತ ಜನರು ಶ್ರಮಿಸಬೇಕಿದೆ"ಎಂದು ಹೇಳಿದರು.ಇಂಡೋ-ಅಮೆರಿಕನ್ ಕಾಂಗ್ರೆಸ್ ಸದಸ್ಯ ರಾಜ ಕೃಷ್ಣಮೂರ್ತಿ ಬುಧವಾರ ಅಮೆರಿಕಾದಲ್ಲಿರುವ ಭಾರತೀಯ ರಾಯಭಾರಿ ತರಣ್ ಜಿತ್ ಸಿಂಗ್ ಸಂಧು ಅವರನ್ನು ಭೇಟಿಯಾಗಿದ್ದರು. ನಂತರ ತರಣ್ ಜಿತ್ ಸಿಂಗ್ ಸಂಧು ಅವರಿಗೆ ಧನ್ಯವಾದ ಅರ್ಪಿಸಿದರು. ಈ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಬೆಂಬಲವಾಗಿ ನಿಂತಿರುವ ಕಾಂಗ್ರೆಸ್ ಸದಸ್ಯರಿಗೆ ಧನ್ಯವಾದ ಎಂದು ಅವರು ಹೇಳಿದ್ದಾರೆ.
ಇಲ್ಲಿಯವರೆಗೆ ನಾಲ್ಕು ವಿಮಾನಗಳಲ್ಲಿ ..
ಈವರೆಗೆ ನಾಲ್ಕು ವಿಮಾನಗಳಲ್ಲಿ ಭಾರತ ಕ್ಕೆ ನೆರವು ಕಳುಹಿಸಲಾಗಿದೆ ಎಂದು ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಟ್ವೀಟ್ ಮಾಡಿದ್ದಾರೆ. ಅಮೆರಿಕಾ ರವಾನಿಸಿದ ತುರ್ತು ಸರಕಿನಲ್ಲಿ 10 ಲಕ್ಷ ಕೊರೊನಾ ಪರೀಕ್ಷಾ ಕಿಟ್ಗಳು, 545 ಆಮ್ಲಜನಕ ಸಾಂದ್ರಕಗಳು, 16 ಲಕ್ಷ ಎನ್ 95 ಮುಖಗವುಸುಗಳು, 457 ಆಮ್ಲಜನಕ ಸಿಲಿಂಡರ್ಗಳು, 440 ನಿಯಂತ್ರಕಗಳು, 220 ಪಲ್ಸ್ ಆಕ್ಸಿಮೀಟರ್ಗಳು, ಒಂದು ನಿಯೋಜಿಸಬಹುದಾದ ಆಮ್ಲಜನಕ ಸಾಂದ್ರತೆಯ ವ್ಯವಸ್ಥೆ ಸೇರಿವೆ ಎಂದು ಹೇಳಿದ್ದಾರೆ.