ಅಂತರರಾಷ್ಟ್ರೀಯ

ಅಮೆರಿಕಾ ಶ್ವೇತಭವನ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಅಂಥೋನಿ ಫೌಚಿ ಎಚ್ಚರಿಕೆ

ಅಮೆರಿಕಾ ಶ್ವೇತಭವನ  ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಅಂಥೋನಿ ಫೌಚಿ ಎಚ್ಚರಿಕೆ

ನ್ಯೂಯಾರ್ಕ್,  ಮೇ 7 :ಭಾರತದಲ್ಲಿ   ಪ್ರಸ್ತುತ    ಉದ್ಭವಿಸಿರುವ   ಕೊರೊನಾ ಗಂಭೀರ   ಪರಿಸ್ಥಿತಿ ಕುರಿತು  ಅಮೆರಿಕಾ  ಶ್ವೇತಭವನದ  ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಚಿ   ಮಹತ್ವದ   ಸಲಹೆಗಳನ್ನು  ನೀಡಿದ್ದಾರೆ.ನಿತ್ಯ  ಲಕ್ಷಗಳ ಸಂಖ್ಯೆಯಲ್ಲಿ ಸೋಂಕು ಪ್ರಕರಣಗಳು,  ಸಾವಿರ ಸಂಖ್ಯೆಯಲ್ಲಿ  ಸಾವುಗಳು  ಸಂಭವಿಸುತ್ತಿರುವುದಕ್ಕೆ  ಅವರು ಕಳವಳ ವ್ಯಕ್ತಪಡಿಸಿದ್ದಾರೆ.ಭಾರತದಲ್ಲಿ  ತಕ್ಷಣದಿಂದಲೇ   3-4 ವಾರಗಳ ಕಾಲ ಲಾಕ್‌ಡೌನ್‌ ವಿಧಿಸುವಂತೆ    ಅವರು ಮನವಿ ಮಾಡಿದ್ದಾರೆ.  ಸೋಂಕಿನ  ಸರಪಳಿ  ತುಂಡರಿಸಲು  ಲಾಕ್‌ಡೌನ್‌ಅತ್ಯವಶ್ಯಕ. ಲಾಕ್‌ಡೌನ್‌ ನಿಂದ  ಆರ್ಥಿಕತೆ  ಹಾನಿಗೊಳಗಾಗುವುದರ ಬಗ್ಗೆ ಚಿಂತಿಸಬೇಕಾಗಿಲ್ಲ ಲಾಕ್‌ಡೌನ್‌ನಿಂದ  ಉಂಟಾಗುವ  ನಷ್ಟಕ್ಕಿಂತ, ಕೊರೊನಾದಿಂದ  ಉಂಟಾಗುವ  ನಷ್ಟ ಭಾರಿ  ಪ್ರಮಾಣದ್ದು ಎಂದು  ಅವರು ಎಚ್ಚರಿಸಿದ್ದಾರೆ.  ಪರಿಸ್ಥಿತಿ  ಇದೇ   ರೀತಿ ಮುಂದುವರಿದರೆ  ಯಾರೂ ಊಹಿಸದಂತಹ  ಹಾನಿಯನ್ನು ಭಾರತ  ಎದುರಿಸಬೇಕಾಗುತ್ತದೆ ಎಂದು  ಅವರು ಎಚ್ಚರಿಸಿದ್ದಾರೆ.

ದೇಶದಲ್ಲಿ  ತಾತ್ಕಾಲಿಕ ಆಸ್ಪತ್ರೆಗಳು  ಹಾಗೂ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು  ಅವರು ಸಲಹೆ ನೀಡಿದ್ದಾರೆ. ಸಾಧ್ಯವಾದಷ್ಟು ಜನರಿಗೆ ಲಸಿಕೆ ನೀಡಬೇಕು  ಹಾಗೂ  ಲಸಿಕೆ ಉತ್ಪಾದನೆ  ಗಮನಾರ್ಹವಾಗಿ ಹೆಚ್ಚಿಸಬೇಕು ಎಂದು ಹೇಳಿದ್ದಾರೆ. ಹೆಚ್ಚಿನ  ಸಂಸ್ಥೆಗಳು ಲಸಿಕೆ ತಯಾರಿಸಬೇಕು. ಕಷ್ಟದ ಸಮಯದಲ್ಲಿ ಭಾರತ ಇತರ ದೇಶಗಳಿಗೆ ಬೆಂಬಲವಾಗಿ ನಿಂತಿದೆ.  ಈಗ ಜಗತ್ತು ಭಾರತದ  ಬೆಂಬಲಕ್ಕೆ  ನಿಲ್ಲಬೇಕು ,  ವೈದ್ಯಕೀಯ ಉಪಕರಣಗಳು ಔಷಧಿಗಳನ್ನು  ಒದಗಿಸುವುದಲ್ಲದೆ ವೈದ್ಯಕೀಯ ಸಿಬ್ಬಂದಿಯನ್ನು ಸಹ ಕಳುಹಿಸಬೇಕು ಎಂದು ಅವರು  ಕೋರಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಭಾರತದಲ್ಲಿ  ಕೊರೊನಾ  ಪರಿಸ್ಥಿತಿಗಳ ಬಗ್ಗೆ ಡಾ.ಫೌಚಿ ಮಾತನಾಡಿದ್ದರು. ಕೋವಿಡ್‌  ವ್ಯಾಪಕ  ಪ್ರಸರಣದಿಂದ   ಭಾರತ  ಭಾರಿ  ಒತ್ತಡದಲ್ಲಿದೆ. ಅಮೆರಿಕದಂತೆಯೇ ಇತರ ದೇಶಗಳು ಭಾರತಕ್ಕೆ ನೆರವು ನೀಡಲು ಮುಂದೆ ಬರಬೇಕು. ಭಾರತದಲ್ಲಿ ಕೋವಿಡ್ ಚಿಕಿತ್ಸೆಗೆ  ಬಳಸುವ ವೈದ್ಯಕೀಯ ಸಲಕರಣೆಗಳ ಕೊರತೆ  ಗಮನದಲ್ಲಿಟ್ಟುಕೊಂಡು ವಿಶ್ವದ ರಾಷ್ಟ್ರಗಳು ಅಗತ್ಯ ಉಪಕರಣ, ಔಷಧಿಗಳನ್ನು   ಒದಗಿಸಬೇಕು. ಇದಲ್ಲದೆ, ವೈದ್ಯಕೀಯ ಸಿಬ್ಬಂದಿಯನ್ನು  ಭಾರತಕ್ಕೆ ಕಳುಹಿಸಬೇಕು. ಅದೇ ಸಮಯದಲ್ಲಿ,  ಸಾಂಕ್ರಾಮಿಕ  ಪ್ರಸರಣ ತಡೆಯಲು ಭಾರತ ಸರ್ಕಾರ  ಎಲ್ಲಾ ನಾಗರಿಕರಿಗೆ ಲಸಿಕೆ ನೀಡಬೇಕು. ಭಾರತದಲ್ಲಿ ಅಭಿವೃದ್ಧಿಪಡಿಸಿದ ಎರಡು ಲಸಿಕೆಗಳ ಜೊತೆಗೆ,  ಅಮೆರಿಕಾ, ರಷ್ಯಾ   ಹಾಗೂ ಇತರ ದೇಶಗಳಿಂದಲೂ ಲಸಿಕೆ ಸಂಗ್ರಹಿಸಿ ಜನರಿಗೆ  ವಿತರಿಸಬೇಕು. ಲಸಿಕೆ  ನೀಡಿಕೆ  ಪ್ರಕ್ರಿಯೆ    ಪರಿಸ್ಥಿತಿಯನ್ನುಸದ್ಯಕ್ಕೆ  ಪರಿಹರಿಸದಿರಬಹುದು. ಆದರೆ,  ಇದು ಕೆಲವು ವಾರಗಳವರೆಗೆ ಸೋಂಕು ಹರಡುವುದನ್ನು ತಡೆಯಬಹುದು "ಎಂದು ಡಾ.ಫೌಚಿ ಹೇಳಿದ್ದಾರೆ.




ಸುದ್ದಿ ಓದಿ