ಅಂತರರಾಷ್ಟ್ರೀಯ

ಅಮೆರಿಕ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ, ಪೊಲೀಸ್ ಅಧಿಕಾರಿ ಸಾವು

ಅಮೆರಿಕ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ, ಪೊಲೀಸ್  ಅಧಿಕಾರಿ ಸಾವು

ವಾಷಿಂಗ್ಟನ್  ಏ , 3 :ಅಮೆರಿಕ  ಕ್ಯಾಪಿಟಲ್ ಕಟ್ಟಡಕ್ಕೆ ವ್ಯಕ್ತಿಯೋರ್ವ ಕಾರು ನುಗ್ಗಿಸಲು ಯತ್ನಿಸಿದ್ದು,  ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಮತ್ತೊಂದು  ಬೆಚ್ಚಿಬೀಳಿಸುವ ದುರಂತ ಸಂಭವಿಸಿದೆ. ಕಟ್ಟಡದ ಮುಂದಿನ ಬ್ಯಾರಿಕೇಡ್ ಬಳಿ ನಿಂತಿದ್ದ ಇಬ್ಬರು ಅಧಿಕಾರಿಗಳ ಮೇಲೆ ಆತ ಕಾರು ಹತ್ತಿಸಿರುವುದಲ್ಲದೆ  ಅಲ್ಲದೇ ಚಾಕುವಿನಿಂದ ಅಧಿಕಾರಿಗಳ ಮೇಲೆ  ಹಲ್ಲೆ ಮಾಡಲು ಯತ್ನಿಸಿದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಅಧಿಕಾರಿಗಳು ಶಂಕಿತ ಆರೋಪಿ ಮೇಲೆ ದಾಳಿ ನಡೆಸಿದ್ದು, ಆತ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ. ಗಾಯಗೊಂಡ ಮತ್ತೋರ್ವ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ   ಎಂದು ಕ್ಯಾಪಿಟಲ್ ಪೊಲೀಸ್ ಕಾರ್ಯಕಾರಿ ಮುಖ್ಯಸ್ಥ ಯೋಗಾನಂದ ಪಿಟ್ಮನ್ ತಿಳಿಸಿದ್ದಾರೆ. ದಾಳಿಯಲ್ಲಿ ಸಾವನ್ನಪ್ಪಿದ್ದ ಅಧಿಕಾರಿಗೆ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಸಂತಾಪ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ