ಕೊರೋನ ಅನಾಗರಿಕ ಯುದ್ಧ ಅಂತ್ಯಗೊಳಿಸಲು ಜೋ ಬೈಡೆನ್ ಶಪಥ
ವಾಷಿಂಗ್ಟನ್, ಜನವರಿ 21 : ನಾನು ಅಮೆಕರಿಕ ಎಲ್ಲ ವರ್ಗ, ಜನತೆಯ ಅಧ್ಯಕ್ಷ, ಇದು ಕೇವಲ ಒಬ್ಬ ವ್ಯಕ್ತಿ ಗೆಲುವಲ್ಲ , ಬದಲಾಗಿ ಪ್ರಜಾಫ್ರಭುತ್ವದ ಗೆಲುವು ಎಂದು ನೂತನ ಅಧ್ಯಕ್ಷ ಜೋಬೈಡೆನ್ ಹೇಳಿದ್ದಾರೆ. 46 ನೇ ಅದ್ಯಕ್ಷರಾಗಿ ಪದಗ್ರಹಣ ಮಾಡಿದ ನಂತರ ಮಾತನಾಡಿದ ಅವರು , ಛಿದ್ರಗೊಂಡ ಆರ್ಥಿಕತೆ ಮತ್ತು ನಾಲ್ಕು ಲಕ್ಷಕ್ಕೂ ಅಧಿಕ ಅಮೆರಿಕನ್ನರ ಅಮೂಲ್ಯ ಜೀವ ಬಲಿತೆಗೆದುಕೊಂಡ ಕೊರೊನಾ ಸೋಂಕಿನಿಂದ ತೀವ್ರ ವಿಭಜನೆಯಾಗಿರುವ ದೇಶದಲ್ಲಿನ ಅನಾಗರಿಕ ಯುದ್ಧವನ್ನು ಅಂತ್ಯಗೊಳಿಸುವುದಾಗಿ ಜೋ ಬೈಡನ್ ಶಪಥ ಮಾಡಿದ್ದಾರೆ.ಭವಿಷ್ಯದ ಅಮೆರಿಕವನ್ನು ಭದ್ರಪಡಿಸಲು ಮಾತಿಗಿಂತಲೂ ಹೆಚ್ಚಿನ ಪ್ರಯತ್ನ, ಶ್ರಮದ ಅಗತ್ಯವಿದೆ. ಅದಕ್ಕೆ ಪ್ರಜಾಪ್ರಭುತ್ವವು ಒಳಗೊಳ್ಳುವ ಎಲ್ಲ ಅಂಶಗಳೂ ಅಗತ್ಯವಾಗಿದೆ ಎಂದರು.
'ನಾವು ನೀಲಿ ವಿರುದ್ಧದ ಕೆಂಪು ಬಣ್ಣದ (ರಿಪಬ್ಲಿಕ್ ವರ್ಸಸ್ ಡೆಮಾಕ್ರಟಿಕ್), ಗ್ರಾಮೀಣ ವರ್ಸಸ್ ನಗರ, ಸಾಂಪ್ರದಾಯಿಕತೆ ವರ್ಸಸ್ ಉದಾರವಾದಗಳ ನಡುವಿನ ಅನಾಗರಿಕ ಯುದ್ಧವನ್ನು ಅಂತ್ಯಗೊಳಿಸಬೇಕಿದೆ. ನಮ್ಮ ಹೃದಯ ಗಟ್ಟಿಗೊಳಿಸುವ ಬದಲು ನಮ್ಮ ಆತ್ಮಗಳನ್ನು ತೆರೆದರೆ ಮಾತ್ರ ಇದು ಸಾಧ್ಯವಾಗಲಿದೆ ಎಂದೂ ಹೇಳಿದರು.ಅಧ್ಯಕ್ಷರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಬಳಿಕ ಮೊದಲ ಟ್ವೀಟ್ ಮಾಡಿದ ಜೋ ಬೈಡನ್, 'ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ವಿಚಾರ ಬಂದಾಗ ವ್ಯರ್ಥ ಮಾಡಲು ಸಮಯವೇ ನಮ್ಮ ಬಳಿ ಇಲ್ಲ. ಹೀಗಾಗಿ ಇಂದು ನಾನು ಓವಲ್ ಕಚೇರಿ ಕಡೆಗೆ ಸಾಗುತ್ತಿದ್ದು, ಅಮೆರಿಕದ ಕುಟುಂಬಗಳಿಗೆ ತಕ್ಷಣದ ಪರಿಹಾರ ನೀಡುವ ಮತ್ತು ದಿಟ್ಟ ಕ್ರಮೈಗೊಳ್ಳುವ ಹಕ್ಕು ಪಡೆದುಕೊಂಡು ಸಮಯ ವ್ಯರ್ಥ ಮಾಡದೆ ಮೊದಲ ದಿನದಿಂದಲೇ ಕಾರ್ಯೋನ್ಮುಖರಾಗುವುದಾಗಿಯೂ ಬೈಡೆನ್ ಹೇಳಿದ್ದಾರೆ.