ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಭೇಟಿ ಖರಾರು
ಲಂಡನ್ , ಮಾ 20: ಈ ವರ್ಷದ ಗಣರಾಜ್ಯೋತ್ಸವ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಬೇಕಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ದೇಶದಲ್ಲಿ ರೂಪಾಂತರಿ ಕೊರೊನಾ ಪ್ರಕರಣಗಳ ಹೆಚ್ಚಳದಿಂದಾಗಿ ಭಾರತ ಭೇಟಿಯನ್ನು ರದ್ದುಪಡಿಸಿಕೊಂಡಿದ್ದರು. ಆಗ ನಿಗಧಿಯಾಗಿದ್ದ ಅವರ ಭಾರತ ಭೇಟಿಯ ದಿನವನ್ನು ಈಗ ಅಂತಿಮಗೊಳಿಸಲಾಗಿದೆ. ಬ್ರಿಟನ್ ಪ್ರಧಾನಿ ಏಪ್ರಿಲ್ 26 ರಂದು ಭಾರತಕ್ಕೆ ಬರಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಆದರೆ, ಎಷ್ಟು ದಿನಗಳ ಭೇಟಿ . ಭಾರತದಲ್ಲಿ ಎಲ್ಲೆಲ್ಲಿಗೆ ಭೇಟಿ ನೀಡಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಜನವರಿ 26 ರಂದು ಭಾರತಕ್ಕೆ ಬರಬೇಕಿದ್ದ ಬೋರಿಸ್ ಜಾನ್ಸನ್ ಏಪ್ರಿಲ್ 26 ರಂದು ಆಗಮಿಸಲಿದ್ದಾರೆ.
ಆದರೆ, ಅವರು ಪ್ರವಾಸದ ಭಾಗವಾಗಿ ಚೆನ್ನೈಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಬ್ರಿಟಿಷ್ ಅಧಿಕಾರಿಗಳು ಚೆನ್ನೈನಲ್ಲಿರುವ ಪರಿಸ್ಥಿತಿ ಗಮನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಬೋರಿಸ್ ಅವರ ಪ್ರಸ್ತುತ ಭೇಟಿಯಿಂದ ಉಭಯ ದೇಶಗಳ ನಡುವೆ ನಡೆಯಬೇಕಿದ್ದ ವ್ಯಾಪಾರ ಮಾತುಕತೆ ಸಮಾಪನ ಗೊಳ್ಳಲಿದೆ. ಭವಿಷ್ಯದಲ್ಲಿ . ಬ್ರಿಟನ್ ಸರ್ಕಾರ ಇಂಟಿಗ್ರೇಟೆಡ್ ರಿವ್ಯೂನ ಭಾಗವಾಗಿ ಇಂಡೋ-ಪೆಸಿಫಿಕ್ ಪ್ರದೇಶದ ಮೇಲೆ ಕೇಂದ್ರೀಕರಿಸಲಿದೆ ಎಂದು ಜಾನ್ಸನ್ ಸರ್ಕಾರ ಹೇಳುತ್ತಿದೆ, ಇದು ಭವಿಷ್ಯದಲ್ಲಿ ವಿಶ್ವದ ಭೌಗೋಳಿಕ ರಾಜಕೀಯ ಕೇಂದ್ರವನ್ನಾಗಿಸಲಿದೆ. .
ಬ್ರೆಕ್ಸಿಟ್ ನಂತರ, ಸೃಷ್ಟಿಯಾಗಿರುವ ಪರಿಸ್ಥಿತಿಗಳು, ವ್ಯಾಪಾರಕ್ಕಾಗಿ ಹೊಸ ಮಾರ್ಗಗಳನ್ನು ಅನ್ವೇಷಿಸಲು 11 ದೇಶಗಳ ಕೂಟದಲ್ಲಿ ಸದಸ್ಯತ್ವವನ್ನು ಕೋರಿ, ಕಳೆ ದ ತಿಂಗಳು ಬ್ರಿಟನ್ ಟ್ರಾನ್ಸ್-ಪೆಸಿಫಿಕ್ ಸಹಭಾಗಿತ್ವಕ್ಕಾಗಿ ಸಮಗ್ರ ಮತ್ತು ಪ್ರಗತಿಪರ ಒಪ್ಪಂದ (ಸಿಪಿಟಿಪಿಪಿ) ಸೇರಲು ಭಾರತಕ್ಕೆ ಕಳೆದ ತಿಂಗಳು ಔಪಚಾರಿಕವಾಗಿ ವಿನಂತಿಸಿತು. ಈ ಭೇಟಿಯೊಂದಿಗೆ ಆ ವಿಷಯಗಳ ಬಗ್ಗೆ ಸ್ಪಷ್ಟೀಕರಣ ಲಭಿಸಲಿವೆ .ಆದರೆ, ಶುಕ್ರವಾರ, ಬ್ರಿಟಿಷ್ ಪ್ರಧಾನಿ ಬೋರಿಸ್ ಕೊರೊನಾ ಲಸಿಕೆಯ ಮೊದಲ ಡೋಸ್ ತೆಗೆದುಕೊಂಡರು. ಲಂಡನ್‌ನ ಆಸ್ಪತ್ರೆಯಲ್ಲಿ ಅಸ್ಟ್ರಾಜೆನಿಕಾ ಲಸಿಕೆ ಹಾಕಿಸಿಕೊಂಡ ನಂತರ "ತುಂಬಾ ಒಳ್ಳೆಯದು, ಅತ್ಯಂತ ವೇಗವಾಗಿದೆ" ಎಂದು ಬೋರಿಸ್ ಹೇಳಿದ್ದರು. ಈ ಸಂದರ್ಭದಲ್ಲಿ, 56 ವರ್ಷದ ಬೋರಿಸ್ ಲಸಿಕೆಯ ಕುರಿತ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು. ಎಲ್ಲರಿಗೂ ಲಸಿಕೆ ಪಡೆದುಕೊಳ್ಳುವಂತೆ ಜನರಿಗೆ ಕರೆ ನೀಡಿದ್ದರು.