ಅಂತರರಾಷ್ಟ್ರೀಯ

ವೆಲ್‌ಕಮ್‌ ಟೂ ಲಿಲ್ಲಿ ಡಯಾನಾ….!

ವೆಲ್‌ಕಮ್‌ ಟೂ ಲಿಲ್ಲಿ ಡಯಾನಾ….!

ಲಂಡನ್, ಜೂನ್‌ 7: ಬ್ರಿಟನ್‌ನ ರಾಜ ಕುಮಾರ ಹ್ಯಾರಿ   ಪತ್ನಿ ಮೇಘನ್ ಮಾರ್ಕೆಲ್  ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶುವಿಗೆ ಲಿಲ್ಲಿಬೆಟ್ ಡಯಾನಾ ಮೌಂಟ್ ಬ್ಯಾಟನ್  ವಿಂಡ್ಸರ್ ಎಂದು  ನಾಮಕರಣ ಮಾಡಲಾಗಿದೆ.  ಕ್ಯಾಲಿಫೋರ್ನಿಯಾ (ಅಮೆರಿಕಾದ)ದ  ಸಾಂಟಾ ಬಾರ್ಬರಾ ಕಾಟೇಜ್ ಆಸ್ಪತ್ರೆಯಲ್ಲಿ ಲಿಲ್ಲಿಬೆಟ್ ಜನಿಸಿದ್ದಾಳೆ   ಎಂದು ಹ್ಯಾರಿ,  ಮೇಘನ್  ದಂಪತಿ  ಭಾನುವಾರ ಪ್ರಕಟಿಸಿದ್ದಾರೆ. ದಂಪತಿಗೆ ಇದು ಎರಡನೇ ಮಗು. ಮೊದಲ ಮಗು ಆರ್ಚಿಗೆ 2 ವರ್ಷ. ಲಿಲ್ಲಿಬೆಟ್ .. ಎಂಬುದು  ಬ್ರಿಟನ್ ರಾಣಿ ಎಲಿಜಬೆತ್  ಅವರ ಅಡ್ಡಹೆಸರು. ಹ್ಯಾರಿಯ ತಾಯಿಯ ಹೆಸರು ಡಯಾನಾ.  ಅವರಿಬ್ಬರ ಹೆಸರು ಸೇರಿಸಿ   ಲಿಲ್ಲಿ ಡಯಾನಾ ಎಂದು ನಾಮಕರಣಗೊಳಿಸಿದ್ದಾರೆ.   ಹ್ಯಾರಿ  ತಾಯಿ  ಡಯಾನಾ  1997 ರಲ್ಲಿ ಕಾರು ಅಪಘಾತದಲ್ಲಿ  ಮೃತಪಟ್ಟಿದ್ದರು.   ಪ್ರಸ್ತುತ  ಹ್ಯಾರಿ,  ಮೇಘನ್ ಬ್ರಿಟಿಷ್ ರಾಜಮನೆತನವನ್ನು ತೊರೆದ ನಂತರ   ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ.



ಸುದ್ದಿ ಓದಿ