ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸ ರದ್ದು
ಲಂಡನ್ , ಜ 5 : ಜನವರಿ 26 ರಂದು ದೆಹಲಿಯ ರಾಜಪಥ್ ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸವನ್ನು ಮಂಗಳವಾರ ರದ್ದುಗೊಳಿಸಿದ್ದಾರೆ. ಬ್ರಿಟನ್ ತನ್ನ ಮೂರನೇ ಕೋವಿಡ್-19 ಲಾಕ್ ಡೌನ್ ಅನ್ನ ಮಂಗಳವಾರ ಆರಂಭಿಸಿದ್ದು, ಸಾಮೂಹಿಕ ಲಸಿಕೆಗಳು ಉಬ್ಬರವನ್ನ ತಿರುಗಿಸುವ ಮುನ್ನ ವೈರಸ್ ತಡೆಗಟ್ಟಲು ಒಂದು ಕೊನೆಯ ರಾಷ್ಟ್ರೀಯ ಪ್ರಯತ್ನ ಎಂದು ಸರ್ಕಾರ ಕರೆ ನೀಡಿದೆ.ಇದೇ 26ರಂದು ಜಾನ್ಸನ್ ಅವರು ಗಣರಾಜ್ಯೋತ್ಸವದಂದು ಭಾರತಕ್ಕೆ ಭೇಟಿ ನೀಡಬೇಕಿತ್ತು, ಆದರೆ ದೇಶದಲ್ಲಿ ಹೆಚ್ಚಿದ ಕರೋನ , ಮತ್ತು ಹೊಸ ರೂಪಾಂತರಿಯ ಕಾರಣ ಅವರ ಭೇಟಿ ಕೊನೆ ಘಳಿಗೆಯಲ್ಲಿ ರದ್ದಾಗಿದೆ ಎಂದೂ ಹೇಳಲಾಗಿದೆ.