ಇಂದು ಬನಶಂಕರಿ ದೇವಿ ರಥೋತ್ಸವ
Today is the Banashankari Devi Chariot Festival.
ಕೊಪ್ಪಳ 31 : ಪ್ರತಿವರ್ಷದಂತೆ ಈ ವರ್ಷವೂ ಕೂಡ ಕೊಪ್ಪಳ ತಾಲ್ಲೂಕಿನ ಗೊಂಡಬಾಳ ಗ್ರಾಮದಲ್ಲಿ ಜ.30 ರಿಂದ ಫೆ.02 ರವರೆಗೆ ಗ್ರಾಮದೇವತೆ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಜರುಗಲಿದ್ದು, ಫೆ.01 ರಂದು ಸಂಜೆ 5.45 ಕ್ಕೆ ರಥೋತ್ಸವ ಜರುಗಲಿದೆ.ಜಾತ್ರೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಜ.30 ರಂದು ಶ್ರೀದೇವಿಗೆ ಕಂಕಣಧಾರಣ ಕಾರ್ಯಕ್ರಮ, ಜ.31 ರಂದು ಬೆಳಿಗ್ಗೆ 6.00 ರಿಂದ 9.30 ರವರೆಗೆ ದೇವಿಗೆ ಫಲಪೂಜಾ ಕಾರ್ಯಕ್ರಮ, ಫೆ.01 ರಂದು ಬೆಳಿಗ್ಗೆ ಹೋಮ ಹವನ ಕಾರ್ಯಕ್ರಮ ಮತ್ತು ಮುತೈದೆಯರಿಂದ ಊಡಿ ತುಂಬುವ ಕಾರ್ಯಕ್ರಮ, ದೇವಿಗೆ ಪುಷ್ಪಾಲಂಕಾರ ಪೂಜೆ, ತೇರಿನ ಮುಂಬಾಗದಲ್ಲಿ ರಂಗೋಲಿ ಸ್ಪರ್ಧೆ, ನಂತರ ಮಧ್ಯಾಹ್ನ 12 ಗಂಟೆಯಿಂದ ಕರಿಯಮ್ಮ ದೇವಸ್ಥಾನದ ಹತ್ತಿರ ಅನ್ನಸಂತರೆ್ಣ ನಡೆಯುವುದು, ಸಂಜೆ 5.45 ಗಂಟೆಗೆ ಮೈನಳ್ಳಿ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಶ್ರೀಗಳ ಅಮೃತ ಹಸ್ತದಿಂದ ಧ್ವಜಾರೋಹಣ ನಂತರ ಶ್ರೀದೇವಿಯ ರಥೋತ್ಸವ ಜರುಗಲಿದೆ. ರಾತ್ರಿ 10 ಗಂಟೆಗೆ ಶ್ರೀ ಸಿದ್ದಲಿಂಗೇಶ್ವರ ನಾಟ್ಯ ಸಂಘದಿಂದ ರೈತ ಮನೆತನ ನಾಟಕ ಪ್ರದರ್ಶನ ಜರುಗಲಿದೆ. ಫೆ.02 ರಂದು ಬೆಳಿಗ್ಗೆ ಶ್ರೀದೇವಿಗೆ ಶಾಕಾಂಬರಿ ಪೂಜಾ, ಕಡುಬಿನ ಕಾಳಗ, ಮದ್ದು ಸುಡುವ ಕಾರ್ಯಕ್ರಮ, ಶಾಲಾ ಮಕ್ಕಳಿಂದ ಹೊಂಬೆಳಕು ರಸಮಂಜರಿ ಕಾರ್ಯಕ್ರಮ, ಮೊದಲಾದ ಕಾರ್ಯಕ್ರಮಗಳು ಜರುಗಲಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಈ ರಥೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಗ್ರಾಮಸ್ಥರು ಪ್ರಕಟಣೆಯ ಮೂಲಕ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 