ಸಮಾಜ ಸೇವೆಯಲ್ಲಿ ಸಂತೋಷವಿದೆ : ವರುಣಗೌಡ್ರ
There is happiness in social service: Varuna Gowdra
ಸಮಾಜ ಸೇವೆಯಲ್ಲಿ ಸಂತೋಷವಿದೆ : ವರುಣಗೌಡ್ರ
ಶಿಗ್ಗಾವಿ 24 : ಯಾವುದೇ ಪಲಾಫೇಕ್ಷೆ ಇಲ್ಲದೆ ಮಾಡುವ ನಿಸ್ವಾರ್ಥ ಸೇವೆಯೂ ನಿಜವಾದ ಸಮಾಜ ಸೇವಕರ ಗುಣವನ್ನು ಸೂಚಿಸುತ್ತದೆ ಎಂದು ವರುಣಗೌಡ ಪಾಟೀಲ ಹೇಳಿದರು. 39 ನೇ ಜನ್ಮ ದಿನದ ಅಂಗವಾಗಿ ದಂಪತಿ ಸಮೇತವಾಗಿ ಹುಬ್ಬಳ್ಳಿಯ ಮಹಾವೀರ ಕೃತಕ ಕೈ ಕಾಲು ಜೋಡಣ ಕೇಂದ್ರಕ್ಕೆ ಭೇಟಿ ನೀಡಿ ಇಬ್ಬರು ಬಡ ಅಂಗವಿಕಲರಿಗೆ ಉಚಿತ ಕೃತಕ ಕಾಲು ಜೋಡಣೆ ಮಾಡಿಸಿ ನಂತರ ಮಾತನಾಡಿದ ಅವರು ನಮ್ಮ ತಂದೆಯವರ ಕಾಲದಿಂದಲೂ ಸಮಾಜ ಸೇವೆ ಧಾರ್ಮಿಕ ಸೇವೆ ಮಾಡುತ್ತ ಬಂದಿದ್ದೇವೆ ನಮ್ಮ ಎಲ್ಲ ಕೆಲಸ ಕಾರ್ಯಗಳಿಗೆ ನಮ್ಮ ತಂದೆಯವರು ನಮಗೆ ಪ್ರೇರಣೆ. ಬಡವರ ಕೂಲಿಕಾರ್ಮಿಕರ ಕಷ್ಟಗಳಲ್ಲಿ ಭಾಗಿಯಾಗುವದು ಖುಷಿ ತರುತ್ತದೆ ನಮ್ಮ ಹತ್ತಿರ ಇರುವ ಅಲ್ಪ ಸ್ವಲ್ಪದರಲ್ಲಿಯೇ ಇನ್ನೊಬ್ಬರಿಗೂ ಹಂಚಿ ತಿನ್ನುವ ಗುಣ ಇಂದಿನ ದಿನಗಳಲ್ಲಿ ಬರಬೇಕಿದೆ. ಅಂತಹ ವಿಚಾರಗಳನ್ನು ನಮ್ಮ ಮನೆಯ ಮಕ್ಕಳಿಗೆ ಹಾಗೂ ಇಂದಿನ ಪೀಳಿಗೆಗೆ ತಿಳಿಸುವ ಅವಶ್ಯಕತೆ ಇದೆ ನಮ್ಮ ಎಲ್ಲ ಕೆಲಸಗಳಿಗೆ ನಮ್ಮ ಕುಟುಂಬದ ಪ್ರೋತ್ಸಾಹ ಸಹಕಾರವಿದೆ ಎಂದರು.ಈ ಸಂದರ್ಭದಲ್ಲಿ ನಾಗರಾಜ್ ಕ್ಯಾಬಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 