ಸಾಮಾಜಿಕ ನಾಟಕಗಳಿಂದ ರಂಗ ಕಲೆ ಜೀವಂತ: ಸಜ್ಜನರ
ಲೋಕದರ್ಶನ ವರದಿ
ಹಾವೇರಿ02: ಗ್ರಾಮೀಣ ಭಾಗದಲ್ಲಿ ನಡೆಯುವ ಸಾಮಾಜಿಕ ನಾಟಕಗಳಿಂದ ರಂಗ ಕಲೆ ಜೀವಂತವಾಗಿದೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಹೇಳಿದರು.
ತಾಲೂಕಿನ ದೇವಗಿರಿ ಗ್ರಾಮದ ಬನಶಂಕರಿ ದೇವಿ ಕಾತರ್ಿಕೋತ್ಸವ ನಿಮಿತ್ಯ ಬನಶಂಕರಿ ದೇವಿ ತರುಣ ನಾಟ್ಯ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪ್ರಕಾಶ ದಿಡಗೂರ ವಿರಚಿತ ರೊಚ್ಚಿಗೆದ್ದ ಹುಚ್ಚ ಮಿಡಿನಾಗರ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಮನರಂಜನೆಗಾಗಿ ಜನರು ಟಿವಿಗಳ ಮೋರೆ ಹೋಗಿದ್ದಾರೆ. ದೃಶ ಮಾಧ್ಯಮಗಳು ಪೈಪೋಟಿಗಿಳಿದು ಜನರಿಗೆ ಹೆಚ್ಚಿನ ಮನರಂಜನೆ ನೀಡುತ್ತಿವೆ. ಈ ಕಾರಣದಿಂದ ನಾಟಕ ನೋಡುಗರ ಸಂಖ್ಯೆ ಕುಸಿದೆ. ಇದರಿಂದ ರಂಗ ಭೂಮಿ ಅವಸಾನದ ಅಂಚಿಗೆ ತಲುಪಿದೆ. ಈ ಕಾರಣದಿಂದ ಗ್ರಾಮೀಣ ಜನರು ಹೆಚ್ಚು ಹೆಚ್ಚು ಸಾಮಾಜಿಕ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ರಂಗ ಭೂಮಿಯನ್ನು ಉಳಿಸಬೇಕಾಗಿದೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಮಾತನಾಡಿದ ಜಿ.ಪಂ.ಸದಸ್ಯ ವಿರುಪಾಕ್ಷಪ್ಪ ಕಡ್ಲಿ ಅವರು, ಪ್ರಕಾಶ ದಿಡಗೂರ ಅವರು ಹೆಚ್ಚಿನ ನಾಟಕಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯ ಕೃಷಿ ಹೆಚ್ಚಿನ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಲಿ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಬಸವರಾಜ ಹೆಡಿಗೊಂಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಸತೀಶ ಸಂದಿಮನಿ, ಸಿದ್ರಾಮೇಶ ಪುರದ, ಅನುಸೂಯಾ ಚನ್ನವೀರಪ್ಪನವರ, ಗೌರಮ್ಮ ಗೌಳಿ, ಹನುಮಣ್ಣ ಕನ್ನನಾಯಕ್ಕನವರ, ಶಿವಪ್ಪ ಅಜ್ಜಮ್ಮನವರ ಸೇರಿದಂತೆ ಮುಂತಾದವರು ಹಾಜರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 