ಜ್ಞಾನದೀಪ ಶಿಕ್ಷಣ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ
Talent award and felicitation ceremony for SSLC students by Gyandeepa Educational Institute
ಲೋಕದರ್ಶನ ವರದಿ
ಬೆಳಗಾವಿ 28 : ಕಳೆದ ಎರಡು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಸೇವೆ ಸಲ್ಲಿಸುವದರ ಜೊತೆಗೆ ವಿದ್ಯಾರ್ಥಿಗಳನ್ನು ವಿವಿಧ ಆಯಾಮಗಳಲ್ಲಿ ಪ್ರೇರಣೆ ನೀಡುತ್ತಾ ಸ್ಪರ್ಧಾತ್ಮಕ ಮನೋಭಾವ ಕಲ್ಪಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅದೇ ಪ್ರಗತಿಯಲ್ಲಿ ಸಾಗಲು ಪ್ರೇರಣೆ ನೀಡುತ್ತಿರುವ ಜ್ಞಾನದೀಪ ಸಂಸ್ಥೆಯ ಕಾರ್ಯ ನಿಜಕ್ಕೂ ಮಾದರಿಯಾದದ್ದು ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಪ್ರೀತಿ ಕಾಮಕರ ಬುಧವಾರ ದಿ. 27ರಂದು ಬೆಳಗಾವಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜ್ಞಾನದೀಪ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ’ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಪಾಲಕರ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭ:ದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಪ ಮಹಾಪೌರ ಹನುಮಂತ ಕೊಂಗಾಲಿ ಮಾತನಾಡಿ ಜ್ಞಾನದೀಪ ಸಂಸ್ಥೆ ಶಿಕ್ಷಣದ ಜೊತೆಗೆ ಸಾಮಾಜಿಕ ಕಳಕಳಿ, ಮಕ್ಕಳಲ್ಲಿ ಸ್ಪರ್ಧಾಮನೋಭಾವ ಬೆಳೆಸುವುದು, ಕನ್ನಡಪರ ಜಾಗೃತಿ ಹೀಗೆ ನಾನಾ ಆಯಾಮಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ.ಸಂಸ್ಥೆಯ ಮಾದರಿ ಕೆಲಸ ಮುಂದುವರೆಯಲಿ ಶಿಕ್ಷಣ ರಂಗ ಪ್ರಜ್ವಲಿಸಲಿ ಎಂದರು. ಇದೇ ಸಂದರ್ಭದಲ್ಲಿ 2026 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬೆಳಗಾವಿ ಸೇರಿದಂತೆ ಜಿಲ್ಲೆಯ ನಾನಾ ಸಂಸ್ಥೆಗಳಲ್ಲಿ ಕಲಿತು ಸಾಧನೆ ಮಾಡಿದ 625 ಕ್ಕೆ 615 ಅಂಕ ಗಳಿಸಿದ ಸಮನ್ವಿತಾ ಮರಬಾ ಶೆಟ್ಟಿ ಮತ್ತು 613 ಅಂಕಗಳಿಸಿದ ಶಿವಪ್ರಸಾದ ಮಳಗಲಿ ರವರಿಗೆ’ ’ಜ್ಞಾನದೀಪ ರತ್ನ ಶ್ರೀ ಪ್ರಶಸ್ತಿ ’ ಸೇರಿದಂತೆ 90ಅ ಕ್ಕಿಂತ ಹೆಚ್ಚು ಅಂಕಗಳಿಸಿದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ’ಜ್ಞಾನದೀಪ ರತ್ನ’ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬೇಸಿಗೆ ಶಿಬಿರದಲ್ಲಿ ವಿಶೇಷ ಸಾಧನೆ ಮಾಡಿದ ರೂಫಿಯಾ ತೆಗ್ಗಿನಮನಿ ಅತ್ಯುತ್ತಮ ವಿದ್ಯಾರ್ಥಿ,ಸಿಂಚನಾ ಹುಬ್ಬಳ್ಳಿಮತ್ತು ಅಫ್ರಾ ಅಮ್ಮಣಗಿ ಉತ್ತಮ ವಿದ್ಯಾರ್ಥಿನಿ,ಪ್ರಜ್ವಲ ಹೊಳೆನ್ನವರ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಲು ಆಗಮಿಸಿದ್ದ ಶಿವೋಹಂ ಫೌಂಡೇಶನ್ ಬೆಳಗಾವಿ ಯ ಡಾ. ಸ್ಪೂರ್ತಿ ಮಾಸ್ತಮರಡಿ ಮಕ್ಕಳಲ್ಲಿ ಯಾವ ರೀತಿ ಏಕಾಗ್ರತೆ ಬೆಳೆಸಿಕೊಳ್ಳಬೇಕು ಮನಸ್ಸಿನ ಹತೋಟಿ ಮತ್ತು ಮುನ್ನುಗುವ ರೀತಿ ,ಗುರಿಯ ಕುರಿತಾದ ಆಯ್ಕೆ ನಮ್ಮ ಮನಸ್ಸಿನ ನಿಯಂತ್ರಣ ಕುರಿತಾಗಿ ಮಕ್ಕಳಿಗೆ ಚಟುವಟಿಕೆ ಮೂಲಕ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ರವೀಂದ್ರ ಶಿಂಧೆ ಮತ್ತು ಬೆಳಗಾವಿ ಗ್ರಾಮೀಣ ವಲಯದ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ಸುನಿಲ್ ಕುಟ್ರೆ ರವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕರಾದ ಖಲೀಲ್ ಮುಲ್ಲಾ, ರಿಜ್ವಾನ್ ನಾವಗೇಕರ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳ ಪಾಲಕರಾದ ಶಿವಾನಂದ ಮರಬಾಶೆಟ್ಟಿ ಮತ್ತು ಸೋಮಲಿಂಗಪ್ಪ ಮಳಗಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಲೋಕೇಶ ತಲ್ಲೂರ,ಬಾಬು ತಲ್ಲೂರ, ಸುರೇಶ ಹುಬ್ಬಳ್ಳಿ ಮತ್ತು ಸದಸ್ಯರು,ಜಬ್ಬಾರ ಸನದಿ,ರಾಧಾ ಮುಚ್ಚಂಡಿ ,ವಿಜಯಲಕ್ಷ್ಮಿ ಬಾಗೇವಾಡಿ, ಕೆ ಆರ್ ಪಾಟೀಲ, ಸೋನಾಲಿ ಲೋಹಾರ,ವಿಶ್ವನಾಥ ಬೀಳಗಿ,ಮಲ್ಲಿಕಾರ್ಜುನ ಕುಂಬಾರ,ಆರ್ ಜಿ ಮುಧೋಳ, ಪ್ರವೀಣ ಕುರುಬಗಟ್ಟಿ ಸದಾನಂದ ಹಲ್ಕಿ ಸೇರಿದಂತೆ ಶಿಕ್ಷಕರು ಮತ್ತು ಪಾಲಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ರಮೇಶ ಬಾಗೇವಾಡಿ ಸರ್ವರನ್ನು ಸ್ವಾಗತಿಸಿದರು. ತೇಜಸ್ವಿನಿ ಬಿ ಪರಿಚಯಿಸಿದರು. ಸಂಸ್ಥೆಯ ಸಂಚಾಲಕ ಶಿವಾನಂದ ತಲ್ಲೂರ ನಿರೂಪಿಸಿದರು ಮಲ್ಲಿಕಾರ್ಜುನ ಕುಂಬಾರ ವಂದಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 