ಡೋನಾಲ್ಡ್ ಟ್ರಂಪ್ ಫೇಸ್‌ಬುಕ್ ಸ್ಥಗಿತ ಕ್ರಮ ಸಮರ್ಥಿಸಿದ ಮೇಲ್ವಿಚಾರಣಾ ಮಂಡಳಿ
ಸ್ಯಾನ್ ಫ್ರಾನ್ಸಿಸ್ಕೋ, ಮೇ 6: ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆ ಸ್ಥಗಿತಗೊಳಿಸಿರುವ ಕ್ರಮವನ್ನು ಸಾಮಾಜಿಕ ಮಾಧ್ಯಮ ಫೇಸ್ಬುಕ್ ಗೆ ಸೇರಿದ ಸ್ವತಂತ್ರ ಮೇಲ್ವಿಚಾರಣಾ ಮಂಡಳಿ ಸಮರ್ಥಿಸಿದೆ.ಕ್ಯಾಪಿಟಲ್ ಕಟ್ಟಡದ ಮೇಲೆ ಟ್ರಂಪ್ ಬೆಂಬಲಿಗರು ಜನವರಿಯಲ್ಲಿ ದಾಳಿ ನಡೆಸಿದ ನಂತರ ಅವರ ಖಾತೆಯನ್ನು ಫೇಸ್ಬುಕ್ ಅಮಾನತುಗೊಳಿಸಿತ್ತು. ಈ ನಿರ್ಣಯವನ್ನು ಬುಧವಾರ ನಡೆದ ಮಂಡಳಿಯ ಸಭೆ ತನ್ನ ಬೆಂಬಲ ತಿಳಿಸಿದೆ. "ಹಿಂಸಾಚಾರಗಳಿಗೆ ಕಾರಣವಾಗುವಂತಹ ತೀವ್ರ ಪರಿಸ್ಥಿತಿಗಳನ್ನು ಟ್ರಂಪ್ ಅಂದು ಸೃಷ್ಟಿಸಿದ್ದರು. ಖಾತೆಯನ್ನು ಅಮಾನತುಗೊಳಿಸಿರುವುದು ಸರಿಯಾದ ಕ್ರಮ ಎಂದು ಮಂಡಳಿಯ ನಿರ್ದೇಶಕ ಥಾಮಸ್ ಹ್ಯೂಸ್ ಹೇಳಿದ್ದಾರೆ.
ಆದರೆ, ಸಂಸ್ಥೆಯ ನೀತಿ ನಿಯಮಗಳಿಗೆ ವಿರುದ್ಧವಾಗಿ ಅಮಾನತ್ತು ಈ ಕ್ರಮವನ್ನು ಅನಿರ್ದಿಷ್ಟವಾಗಿ ವಿಸ್ತರಿಸಬಾರದು, ಆರು ತಿಂಗಳ ಅವಧಿಯ ನಂತರ ಮರುಪರಿಶೀಲಿಸಬೇಕು ಎಂದು ಮಂಡಳಿ ಸೂಚಿಸಿದೆ. ಖಾತೆಯನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲು ಅವಕಾಶ ಕಲ್ಪಿಸಬೇಕೆಂಬ ಫೇಸ್‌ಬುಕ್‌ನ ಮನವಿಯನ್ನು ಮಂಡಳಿ ತಿರಸ್ಕರಿಸಿದೆ.ಸೂಕ್ತ ದಂಡ ವಿಧಿಸುವಲ್ಲಿ ಫೇಸ್‌ಬುಕ್ ವಿಫಲವಾಗಿದೆ ಎಂದು ವ್ಯಾಖ್ಯಾನಿಸಿರುವ ಮಂಡಳಿ, ಯಾರಾದರೂ ಪದೇ ಪದೇ ದುರುದ್ದೇಶಪೂರಿತ ಸಂದೇಶಗಳನ್ನು ಪೋಸ್ಟ್ ಮಾಡಿದರೆ ಅವರ ಖಾತೆಯನ್ನು ನಿರ್ಧಿಷ್ಟಕಾಲ ಅಮಾನತುಗೊಳಿಸಬೇಕು ಅಥವಾ ಆ ಪೋಸ್ಟ್‌ಗಳನ್ನು ಅಳಿಸಬೇಕು ಎಂದು ಮಂಡಳಿ ಸೂಚಿಸಿದೆ.