ಸ್ವಾಮಿ ವಿವೇಕಾನಂದ ಶಾಲೆ: ಅಬ್ದುಲ್ ಕಲಾಂ ಜಯಂತಿ
Swami Vivekananda School: Abdul Kalam Jayanti
ಸ್ವಾಮಿ ವಿವೇಕಾನಂದ ಶಾಲೆ: ಅಬ್ದುಲ್ ಕಲಾಂ ಜಯಂತಿ
ಕಂಪ್ಲಿ 15: ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಭಾರತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮತ್ತು ಜೀವನವು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಡಾ.ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ಸಂಚಾಲಕ ಬಡಿಗೇರ್ ಜಿಲಾನಸಾಬ್ ಹೇಳಿದರು. ಕಂಪ್ಲಿ-ಕೋಟೆಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಬ್ದುಲ್ ಕಲಾಂ ರವರ 94ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ, ವಿಜ್ಞಾನ, ಬಾಹ್ಯಾಕಾಶ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ಆದ್ದರಿಂದ ಕ್ಷಿಪಣಿ ಪಿತಾಮಹ ಎಂದು ಪ್ರಶಿದ್ಧಿ ಪಡೆದಿದ್ದಾರೆ. ಅಲ್ಲದೇ ಎಲ್ಲ ಮಕ್ಕಳಿಗೂ ಮುದ್ದಿನ ಮೇಷ್ಟು ಆಗಿದ್ದರು. ಜ್ಞಾನ, ವಿವೇಕ ಹಾಗೂ ಸರಳತೆಯ ಭಾಗವಾಗಿದ್ದ ಅವರು ವಿಜ್ಞಾನ ಕ್ಷೇತ್ರದಿಂದ ಹಿಡಿದು ರಾಜಕೀಯ ಕ್ಷೇತ್ರದಲ್ಲೂ ಪಾಂಡಿತ್ಯ ಸಾಧಿಸಿದ್ದರು. ಭಾರತದ ಸ್ವಾವಲಂಭಿ ಜ್ಞಾನದ ಪರಿಕಲ್ಪನೆಗೆ ಅಬ್ದುಲ್ ಕಲಾಂ ಅವರು ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.
ಟ್ರಸ್ಟ್ ಉಪಾಧ್ಯಕ್ಷ ಎ.ಎಸ್.ಯಲ್ಲಪ್ಪ ಮಾತನಾಡಿ, ಕಲಾಂ ಅವರು ನೀಡಿದ ಮಹಾನ್ ಕೊಡುಗೆಯಿಂದ ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯ ಜೀವನ ನಡೆಸುವ ಜೊತೆಗೆ ಪ್ರತಿಯೊಂದು ರಂಗದಲ್ಲಿ ದೇಶವು ಸಾಧನೆ ಮಾಡುತ್ತಾ ಸಾಗಲು ಕಾರಣವಾಗಿದೆ. ಇಂದಿನ ಮಕ್ಕಳು ಶಿಕ್ಷಣ ಜೊತೆ ಕಲಾಂ ಅವರ ಇತಿಹಾಸವುಳ್ಳ ಪುಸ್ತಕಗಳನ್ನು ಓದುವ ಮೂಲಕ ಜ್ಞಾರ್ನಾಜನೆ ವೃದ್ಧಿಸಿಕೊಳ್ಳಬೇಕು ಎಂದರು. ಆರಂಭದಲ್ಲಿ ಅಬ್ದುಲ್ ಕಲಾಂ ಜೀ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಿದರು. ಜಯಂತಿ ಅಂಗವಾಗಿ ಏರಿ್ಡಸಿದ್ದ ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾತ ವಿತರಿಸಿದರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಕಂಬತ್ ಶ್ವೇತಾ, ವರ್ಷಾ ಮಂಜುಮದರ್, ಆರ್.ಕೆ. ಮುಸ್ಕಾನ್, ಕೊಲ್ಕಾರ ಉಮಾ, ಜೆ.ಅಕ್ಷತಾ, ನಂದಿನಿ, ಗೌಸಿಯಾ, ಮಠದ ಸುನೀತಾ, ಕಂಬತ್ ಕಾವ್ಯಾ ಸೇರಿದಂತೆ ವಿದ್ಯಾರ್ಥಿಗಳು ಪಾಲಕ ಪೋಷಕರು ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 