ಬೆಳಗಾವಿ

ರಾಜ್ಯ ಮಟ್ಟಕ್ಕೆ ಆಯ್ಕೆ

ರಾಜ್ಯ ಮಟ್ಟಕ್ಕೆ ಆಯ್ಕೆ

         ಬೆಳಗಾವಿ  21: 2025-26 ನೇ ಸಾಲಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಹೊಸವಂಟಮುರಿ ಗ್ರಾಮೀಣ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಸಹಶಿಕ್ಷಕಿ ಜಾಸ್ಮಿನ್‌. ಕಡಬಿ ಇವರು 4100 ಮೀಟರ್ ರಿಲೇ, ವಾಲಿಬಾಲ್ ಹಾಗೂ ಗುಂಡು ಎಸೆತ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಮತ್ತು ಬೆಳಗಾವಿ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ.

        2023-24 ನೇ ಸಾಲಿನಲ್ಲಿಯೂ ಕೂಡ ರಾಷ್ಟ್ರ ಮಟದಲ್ಲ್ಟಿ ಚೆನ್ನೈನಲ್ಲಿ ಪ್ರತಿನಿಧಿಸಿ ಬೆಳಗಾವಿ ಜಿಲ್ಲೆಯ ಹೊಸವಂಟಮುರಿ ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ ಹೆಗ್ಗಳಿಕೆ ಜಾಸ್ಮಿನ್ ಅವರಿಗೆ ಸಲ್ಲುತ್ತದೆ. ಈ ಕುರಿತು ಹೊಸವಂಟಮುರಿ ಶಾಲೆಯ ಮಕ್ಕಳು ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಪ್ರಯುಕ್ತ ಗ್ರಾಮ ಪಂಚಾಯತ ಅಧ್ಯಕ್ಷರು/ಸದಸ್ಯರು, ಎಸ್‌.ಡಿ.ಎಮ್‌.ಸಿ ಅಧ್ಯಕ್ಷರು/ಸದಸ್ಯರು, ಶಾಲಾ ಪ್ರಧಾನ ಗುರುಗಳು ಶ್ರೀ ಎಮ್‌. ಎ. ಮಾಹುತ ಹಾಗೂ ಸರ್ವ ಗುರು ಬಳಗದವರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿ ಶುಭ ಹಾರೈಸಿದ್ದಾರೆ. 


ಸುದ್ದಿ ಓದಿ