ಮೂಡಲಗಿ

ಕಬಡ್ಡಿ ತಂಡಕ್ಕೆ ವಿದ್ಯಾರ್ಥಿಗಳ ಆಯ್ಕೆ

ಕಬಡ್ಡಿ ತಂಡಕ್ಕೆ ವಿದ್ಯಾರ್ಥಿಗಳ ಆಯ್ಕೆ

ಮೂಡಲಗಿ24: ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಗಳಾದ ಭೀಮಪ್ಪ ಬ್ಯಾಕೂಡ ಮತ್ತು ದಾನಯ್ಯ ಹಿರೇಮಠ ಅವರು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಬಡ್ಡಿ ತಂಡಕ್ಕೆ (ಕಬಡ್ಡಿ ಬ್ಲೂ) ಅಯ್ಕೆಯಾಗಿರುವರು. ಇತ್ತೀಚೆಗೆ ಕಲಾದಗಿಯ ಸರ್ಕಾರಿ  ಪದವಿ ಕಾಲೇಜುದಲ್ಲಿ ಜರುಗಿದ ಆಯ್ಕೆ ಪ್ರಕ್ರಿಯೆಯಲ್ಲಿ ಅವರ ಆಯ್ಕೆ ಪ್ರಕಟಿಸಿರುವರು. ಇಬ್ಬರು ಆಟಗಾರರು ಬೆಂಗಳೂರಿನಲ್ಲಿ ಜರುಗಲಿರುವ ಅಂತರ್ ವಿಶ್ವವಿದ್ಯಾಲಯದ ಕಬಡ್ಡಿ ಟೂರ್ನಿಯಲ್ಲಿ ರಾಣಿ ಚನ್ನಮ್ಮ ವಿವಿ ತಂಡವನ್ನು ಪ್ರತಿನಿಧಿಸಲಿದ್ದಾರೆ.

ವಿದ್ಯಾರ್ಥಿ ಗಳನ್ನು ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಪ್ರಾಚಾರ್ಯ ಪ್ರೊ. ಎ.ಪಿ. ರಡ್ಡಿ, ಕ್ರೀಡಾ ಅಧ್ಯಕ್ಷ ಪ್ರೊ.ಎಸ್.ಬಿ. ಖೋತ, ದೈಹಿಕ ನಿರ್ದೇಶಕ ಬಿ.ಎಸ್. ಕುಂಬಾರ ಅವರು ಅಭಿನಂದಿಸದ್ದಾರೆ.



ಸುದ್ದಿ ಓದಿ