ವಿದ್ಯಾರ್ಥಿಗಳಿಗಾಗಿ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮ
ತುಕ್ಕಾನಟ್ಟಿ: ಮಹಿಳಾ ಕಲ್ಯಾಣ ಸಂಸ್ಥೆ ಹಾಗೂ ಜೈ ಭಾರತ ಫೌಂಡೇಶನ್ ಬೆಳಗಾವಿ ವತಿಯಿಂದ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮವು ಇತ್ತೀಚೆಗೆ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಸಿದ್ದಾರೂಢ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ನಮ್ಮಲ್ಲಿರುವ ಅಜ್ಞಾನದಿಂದ ನಮ್ಮ ದೇಶದಲ್ಲಿ ಮೂಢನಂಬಿಕೆಗಳು ವ್ಯಾಪಕವಾಗಿ ಬೆಳೆದಿವೆ. ನಮ್ಮ ಭಾರತೀಯ ಸಮಾಜವು ವಿವಿಧ ಧರ್ಮಗಳು, ಸಾಂಸ್ಕೃತಿಕ ಜನಾಂಗೀಯ, ಭಾಷಾ ಮತ್ತು ಜನಾಂಗೀಯ ಗುಂಪುಗಳಿಗೆ ಸೇರಿದ ಜನರಿಂದ ಕೂಡಿದೆ. ಆದ್ದರಿಂದ ಮೂಢನಂಬಿಕೆಗಳು ಮತ್ತುಕುರುಡು ನಂಬಿಕೆಗಳನ್ನು ಹೆಚ್ಚಾಗಿ ನಂಬುತ್ತೇವೆ. ಮೂಢನಂಬಿಕೆಗಳನ್ನು ಹೆಚ್ಚಾಗಿ ಹಿರಿಯರು ಕಿರಿಯರೆನ್ನದೆ ಎಲ್ಲರೂ ನಂಬುತ್ತಾರೆ. ಇದನ್ನು ಹೋಗಲಾಡಿಸಲು ಚಿದಾನಂದ ದೊಡಮನಿಯವರ ಪವಾಡಗಳ ರಹಸ್ಯಬಯಲು ಕಾರ್ಯಕ್ರಮವನ್ನು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು