ಹುಕ್ಕೇರಿ

ಸತೀಶ ಜಾರಕಿಹೊಳಿ ಹೇಳಿಕೆಯಿಂದ ಹಿಂದುಗಳ ಭಾವನೆಗಳಿಗೆ ಧಕ್ಕೆ

ಸತೀಶ ಜಾರಕಿಹೊಳಿ ಹೇಳಿಕೆಯಿಂದ ಹಿಂದುಗಳ ಭಾವನೆಗಳಿಗೆ ಧಕ್ಕೆ

ಲೋಕದರ್ಶನ ವರದಿ

ಯಮಕನಮರಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾರುತಿ ಅಷ್ಠಗಿ ರಾಜಿನಾಮೆಗೆ ಆಗ್ರಹ

ಉಳ್ಳಾಗಡ್ಡಿ-ಖಾನಾಪೂರ 09: ನಿಪ್ಪಾಣಿಯಲ್ಲಿ ಸತೀಶ ಜಾರಕಿಹೊಳಿ ಕಾರ್ಯಕ್ರಮವೊಂದರಲ್ಲಿ ಹಿಂದು ಅಶ್ಲಿಲ ಪದ ಗಂದಾ ಹೈ ಎಂಬ ಪದವನ್ನು ಉಪಯೋಗಿಸಿದ್ದಾರೆ. ಇದನ್ನು ಸಮಸ್ತ ಹಿಂದುಗಳು ಖಂಡಿಸುವುದರೊಮದಿಗೆ ಅವರು ರಾಜೀನಾಮೆ ನೀಡಬೇಕೆಂದು ಬಿಜೆಪಿಯ ಮುಖಂಡ ಹಾಗೂ ಕರಕುಶಲ ನಿಗಮದ ಅಧ್ಯಕ್ಷ ಮಾರುತಿ ಅಷ್ಠಗಿ ಯಮಕನಮರಡಿಯಲ್ಲಿ ಆಗ್ರಹಿಸಿದರು.

  ಅವರು ದಿ. 8ರಂದು ಯಮಕನಮರಡಿಯ ರವಿಂದ್ರ ಹಂಜಿಯವರ ಕಂಪೌಂಡನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಸತೀಶ ಜಾರಕಿಹೊಳಿಯವರಿಂದ ಹಿಂದು ಧರ್ಮವನ್ನು ಅವಹೇಳನ ಮಾಡುವಂತಹ ಕೆಲಸ ಮೊದಲಿನಿಂದಲೂ ನಡೆದುಕೊಂಡು ಬಂದಿದ್ದು ಅವರು ಅದನ್ನು ಪದೇ ಪದೇ ಮುಂದುವರೆಸುತ್ತಿದ್ದಾರೆ. ಹಿಂದು ಎಂಬುದು ಜನರ ಧಾಮರ್ಿಕ ನಂಬಿಕೆ, ಬಹುಸಂಖ್ಯಾ ಹಿಂದುಗಳ ಮನಸ್ಸಿಗೆ ಇವರ ಹೇಳಿಕೆಯಿಂದ ಘಾಸಿಯಾಗಿದೆ. ಇಂದಿನ ರಾಜಕಾರಣಕ್ಕೆ ಹಿಂದುಗಳಿಂದ ರಾಜಕಾರಣಕ್ಕೆ ಬಂದವರು ಬಹುಸಂಖ್ಯಾತ ಹಿಂದುಗಳ ಮತದಿಂದ ಶಾಸಕರಾದರು ಸಚಿವರಾದರು, ಹಿಂದು ಧರ್ಮ, ಹಿಂದು ಸಂಸ್ಕೃತಿ, ಹಿಂದುಗಳ ಭಾವನೆಗಳಿಗೆ, ಧಕ್ಕೆ ತರುವ ಕೆಲಸವನ್ನು ಇನ್ನೂವರೆಗೂ ಬಿಡುತ್ತಿಲ್ಲ, ಹಾಗಾಗಿ ಎ ತೋ ಅಭೀ ಟೈಲರ್ ಹೈ, ಅಭೀ ಫೀಕ್ಚರ್ ಬಾಕಿ ಹೈ ಅಂತಾರೆ. ಅಲ್ಲಿ ಇನ್ನೂ ಎಷ್ಟು ಅವಹೇಳನ ಮಾಡಬಹುದು ಎಂಬುದನ್ನು ಫಿಕ್ಚರ್ನಲ್ಲಿ ಹೇಳಬಹುದು. 

ಹಿಂದುಗಳನ್ನು ಮೂರ್ಖರೆಂದು ತಿಳಿದಿದ್ದಾರೆ. ಹಿಂದುಗಳು ನಾನೇನು ಹೇಳಿದರು ತಡೆದುಕೊಳ್ಳುತ್ತಾರೆ, ಪ್ರತಿರೋಧ ತೊರುವುದಿಲ್ಲ ಎಂದು ತಿಳಿದಿದ್ದು ಮುಂದಿನ ದಿನಗಳಲ್ಲಿ ಅಂದರೆ 2023 ರಲ್ಲಿನ ಚುನಾವಣೆಯಲ್ಲಿ ಇವರನ್ನು ಮನೆಗೆ ಕಳಿಸುವತನಕಾ ಹಿಂದುಗಳು ಮನೆಯಲ್ಲಿ ಕೊಡ್ರುವುದಿಲ್ಲಾ ಎಂಬುದನ್ನು ಸಾಬಿತು ಮಾಡುತ್ತಾರೆ ಎಂಬುದು ನನ್ನ ಅನಿಸಿಕೆ. 

ಹಿಂದುಗಳಿಗೊಂದು ಕೋರಿಕೆ: ಎಲ್ಲೆಲ್ಲಿ ಈ ಸತೀಶ ಜಾರಕಿಹೊಳಿಯವರು ಕಾಂಗ್ರೆಸ್ ಅಭ್ಯಥರ್ಿ ಪರವಾಗಿ ಚುನಾವಣೆ ಪ್ರಚಾರಕ್ಕೆ ಹೊಗುತ್ತಾರೊ ಅಲ್ಲಿ ಎಲ್ಲಾ ಹಿಂದುಗಳು ಅಭ್ಯರ್ಥಿ  ಪರವಾಗಿ ಬಂದಾಗ ಅವರನ್ನು ಸೋಲಿಸುವ ಕೆಲಸ ನಡೆಯಬೇಕು. ಹೇಳಿಕೆಯನ್ನು ಸಮಂಜಸ ಎಂದಿರುವ ಸತೀಶ ಜಾರಕಿಹೊಳಿಯವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಬೇಕು.ಕಾಂಗ್ರೆಸ್ ತತ್ವ ಸಿದ್ಧಾಂತಗಳು ಹಿಂದುಗಳ ಪರವಾಗಿದ್ದರೇ ಅವರನ್ನು ತೆಗೆದುಹಾಕಿ, ಹಿಂದುಗಳ ಬಗ್ಗೆ ಮಾತನಾಡಿದ್ದಕ್ಕೆ ಕ್ಷಮೆಯಾಚಿಸಬೇಕು ಎಂದು ಮಾರುತಿ ಅಷ್ಟಗಿ ಹೇಳಿ ಇಲ್ಲವಾದರೆ ಮುಂಬರುವ ದಿನಗಳಲ್ಲಿ ಪ್ರತಿಭಟನೆ ಉಗ್ರವಾಗಲಿದೆ ಎಂದರು.

ಯಮಕನಮರಡಿಯ ಬಿಜೆಪಿ ಮುಖಂಡರಾದ ರವಿಂದ್ರ ಹಂಜಿ, ಈರಣ್ಣಾ ಗುರವ, ಕುಶಾಲಸಿಂಗ ರಜಪೂತ, ಮಹಾದೇವ ಮಜತಿ, ಮುಂತಾದವರು ಉಪಸ್ಥಿತರಿದ್ದರು 

ಸುದ್ದಿ ಓದಿ