ಅಂತರರಾಷ್ಟ್ರೀಯ

ಹೌತಿಗಳಿಂದ ಕ್ಷಿಪಣಿ ದಾಳಿ: ಯೆಮೆನ್‍ ನ ಈಶಾನ್ಯ ಭಾಗದಲ್ಲಿ 12 ಮಂದಿ ಸಾವು

ಹೌತಿಗಳಿಂದ ಕ್ಷಿಪಣಿ ದಾಳಿ: ಯೆಮೆನ್‍ ನ ಈಶಾನ್ಯ ಭಾಗದಲ್ಲಿ 12 ಮಂದಿ ಸಾವು

 ಕೈರೋ, ಜೂನ್‍ 6 :ಯೆಮೆನ್‍ ನ ಈಶಾನ್ಯ ಭಾಗದ ಮಾರಿಬ್ ಪ್ರಾಂತ್ಯದಲ್ಲಿ ಸೇನಾ ಪ್ರಧಾನ ಕಚೇರಿ ಮೇಲೆ ಹೌತಿ ಉಗ್ರರು ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಯಲ್ಲಿ 12 ಮಂದಿ ಮೃತಪಟ್ಟು ಇತರ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಸರ್ಕಾರಿ ಮೂಲವೊಂದು ಸ್ಪುಟ್ನಿಕ್ ಸುದ್ದಿ ಸಂಸ್ಥೆಗೆ ತಿಳಿಸಿದೆ. ‘ಮರಿಬ್‍ ನಗರದ ಯೆಮೆನ್‍ ಸಶಸ್ತ್ರ ಪಡೆಗಳ ಆಡಳಿತಾತ್ಮಕ ಪ್ರಧಾನ ಕಚೇರಿಯ ಪೆಟ್ರೋಲ್ ಸ್ಟೇಷನ್‍ ಮೇಲೆ ಖಂಡಾಂತರ ಕ್ಷಿಪಣಿ ದಾಳಿ ನಡೆದಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ನಾಗರಿಕರು ಮತ್ತು ಸೇನಾ ಸಿಬ್ಬಂದಿ ಸೇರಿದ್ದಾರೆ.’ ಎಂದು ಮೂಲವು ತಿಳಿಸಿದೆ.  ಹೌತಿಗಳು ಮತ್ತು ಯೆಮೆನ್‍ ಸರ್ಕಾರಿ ಪಡೆಗಳ ನಡುವೆ ಕಳೆದ ಆರು ವರ್ಷಗಳಿಂದ ಸಂಘರ್ಷ ನಡೆಯುತ್ತಿದೆ. 2015ರಲ್ಲಿ ಯೆಮೆನ್‍ ಸರ್ಕಾರದೊಂದಿಗೆ ಸೌದಿ ಅರೇಬಿಯಾ ಸೇರಿದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಗಯಿಸಿದೆ. ಎರಡೂ ಸರ್ಕಾರಗಳ ಪಡೆಗಳು ಇಸ್ಲಾಮಿಕ್ ಬಂಡುಕೋರ ಚಳವಳಿ ವಿರುದ್ಧ ವೈಮಾನಿಕ, ಸಾಗರ ಮತ್ತು ಭೂ ಭಾಗದ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.  ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯವನ್ನು ಹಾನಿ ಮಾಡುವ ಈ ಸಂಘರ್ಷವನ್ನು ವಿಶ್ವಸಂಸ್ಥೆ, ಮಾನವೀಯ ದುರಂತವೆಂದು ಬಣ್ಣಿಸಿದೆ. 

  

ಸುದ್ದಿ ಓದಿ