ಅಂತರರಾಷ್ಟ್ರೀಯ

ನಾಳೆ ಬೈಡೆನ್ ಪದಗ್ರಹಣ, ವಾಷಿಂಗ್ಟನ್‌ ನಲ್ಲಿ ಬಿಗಿಭದ್ರತೆ

ನಾಳೆ ಬೈಡೆನ್ ಪದಗ್ರಹಣ,  ವಾಷಿಂಗ್ಟನ್‌ ನಲ್ಲಿ ಬಿಗಿಭದ್ರತೆ

ವಾಷಿಂಗ್ಟನ್, ಜನವರಿ 19 :  ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್  ಪದಗ್ರಹಣ  ಉದ್ಘಾಟನಾ ಸಮಾರಂಭ ನಾಳೆ ನಡೆಯಲಿದ್ದು,  ಭದ್ರತೆಗಾಗಿ  ಸಾವಿರಾರು ನ್ಯಾಷನಲ್ ಗಾರ್ಡ್ ಯೋಧರು  ವಾಷಿಂಗ್ಟನ್‌ಗೆ ಆಗಮಿಸಿದ್ದಾರೆ. ಈ ವಿಷಯವನ್ನು  ಸಿಎನ್‌ಎನ್ ವಾಹಿನಿ ಸೋಮವಾರ ವರದಿ ಮಾಡಿದೆ. ಸದ್ಯ  ರಾಜಧಾನಿ ವಾಷಿಂಗ್ಟನ್‌ನಲ್ಲಿ ನಿಯೋಜಿಸಲಾದ ಒಟ್ಟು ರಾಷ್ಟ್ರೀಯ ಗಾರ್ಡ್ ಸೈನಿಕರ ಸಂಖ್ಯೆ 21,000 ಕ್ಕೆ ಏರಿಕೆಯಾಗಿದೆ.

ಕಳೆದ 6 ರಂದು ನಿರ್ಗಮಿತ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಬೈಡೆನ್  ಚುನಾವಣಾ  ವಿಜಯವನ್ನು ಕಾಂಗ್ರೆಸ್ ಪ್ರಮಾಣೀಕರಿಸದಂತೆ ತಡೆಯುವ ಉದ್ದೇಶದಿಂದ ಕ್ಯಾಪಿಟಲ್ ಹಿಲ್ ನುಗ್ಗಿ ಧಾಂದಲೆ ಮಾಡಿದ್ದರು.ಈ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಸಲಾಗಿದೆ. ಗಲಭೆಯಲ್ಲಿ ಮಹಿಳಾ ವಾಯುಪಡೆಯ ಯೋಧೆ  ಸೇರಿದಂತೆ ಕನಿಷ್ಠ ಐವರು  ಸಾವನ್ನಪ್ಪಿದ್ದರು,  170 ಕ್ಕೂ  ಹೆಚ್ಚು 70 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಗಲಭೆ ಪ್ರಚೋದಿಸಿದ್ದಕ್ಕಾಗಿ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಕಳೆದ ವಾರ ಟ್ರಂಪ್ ಅವರನ್ನು ದೋಷಾರೋಪಣೆಗೆ ಗುರಿ  ಮಾಡಿದೆ. ನಾಳೆ  ಬೈಡೆನ್  ಪದಗ್ರಹಣ  ಉದ್ಘಾಟನೆಯ ಸಂದರ್ಭದಲ್ಲಿ ಭದ್ರತೆ ಖಚಿತಪಡಿಸಿಕೊಳ್ಳಲು 25 ಸಾವಿರ ಸೈನಿಕರನ್ನು, ನಿಯೋಜನೆ ಮಾಡಲಾಗಿದೆ ಎಂದು ರಕ್ಷಣಾ ಇಲಾಖೆ ಶನಿವಾರ ತಿಳಿಸಿದೆ. 



ಸುದ್ದಿ ಓದಿ