ಸರಕಾರದಲ್ಲಿ ಖಾಲಿ ಇರುವ ಹುದ್ದೆ ಕೂಡಲೇ ಭರ್ತಿ ಮಾಡಬೇಕೆಂದು ಆಗ್ರಹಿಸಿ ಮನವಿ
ಮೂಡಲಗಿ: ಕೆಲವು ವರ್ಷಗಳಿಂದ ಸರರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಸರಕಾರ ಕೂಡಲೇ ಭರ್ತಿ ಸರಕಾರ ಬೆಳಗಾವಿ ನಡೆಯುತ್ತಿರುವ ಅಧಿವೇಶನದಲ್ಲಿ ಕ್ರಮಕೈಗೊಳ್ಳಬೇಕೆಂದು ತಾಲೂಕಿನ ಕಲ್ಲೋಳಿ ಪಟ್ಟಣದ ಜೈ ಹನುಮಾನ ಯುವ ಜನ ಸೇವಾ ಸಂಘದ ಅಧ್ಯಕ್ಷ ಪರಶುರಾಮ ಇಮಡೇರ ನೇತೃತ್ವದಲ್ಲಿ ಪದಾಧಿಕಾರಿಗಳು ಸೋಮವಾರದಂದು ಮೂಡಲಗಿ ಗ್ರೇಡ್ಟು ತಹಶೀಲ್ದಾರ ಮೂಲಕ ಮುಖ್ಯಮತ್ರಿಗಳಿಗೆ ಮನವಿಸಲ್ಲಿಸಿದರು
ಯುವಕರು/ ಯುವತಿಯರು ಹಗಲು ರಾತ್ರಿಯನ್ನದೆ ಕಷ್ಟಪಟ್ಟು ಓದಿ ಹುದ್ದೆ ಸಿಗದೆ ಹತಾಶದಲ್ಲಿದ್ದಾರೆ ಕಷ್ಟಪಟ್ಟು ಓದಿಸಿದ ತಂದೆ ತಾಯಂದಿರು ಎನೆನೂ ಆಸೆ ಪಟ್ಟು ಏನೂ ಮಾಡದ ಪರಿಸ್ಥಿತಿಯಲ್ಲಿದ್ದಾರೆ ಸರಕಾರ ಈ ವಿಷಯದ ಬಗ್ಗೆ ಗಮನಹರಿಸುತ್ತಿಲ್ಲ. ಇದು ಹೀಗೆ ಮುಂದುವರೆದರೆ ಯವತಿ ಯುವಕರು ವಯೋಮಿತಿ ಮೀರಿ ಯಾವುದೆ ಹುದ್ದೆಗೆ ಅರ್ಹತೆ ಸಿಗಲಾರದಂತೆ ಪರಸ್ಥಿತಿ ನಿರ್ಮಾಣವಾಗುತ್ತದೆ ಕಾರಣ ಸರಕಾರ ಈ ಮೂಲಕ ಗಮನ ಹರಿಸಿ ಪರಿಹಾರ ಕಂಡು ಹಿಡಿಯಬೇಕೆಂದು ಮನವಿ ಮುಖಾಂತರ ತಿಳಿಸಲಾಗಿದೆ.
ಸಂಘದ ಅಧ್ಯಕ್ಷ ಪರಶುರಾಮ ಇಮಡೇರ, ಉಪಾಧ್ಯಕ್ಷ ಮಾಹಾಮತೆಶ ಕಡಗಲಿ, ರಾಜಪ್ಪ ಮಾವರಕರ, ಅನಿಲ ಕಾನಗೌಡರ, ಸಿದ್ದಪ್ಪ ಪೂಜೇರಿ ಸುರೇಶ ಕಲಾಲ, ಭೀಮಶಿ ಕಡಲಗಿ, ರಾಮಣ್ಣ ಕಾಡದವರ, ಪಾಂಡುರಂಗ ಬಡಿಗೇರ, ಹಣಮಂತ ತೋಟಗಿ ಮತ್ತಿತರರು ಉಪಸ್ಥಿತರಿದ್ದರು.