ರೇಣುಕಾಚಾರ್ಯ ಜಯಂತಿ ಆಚರಣೆ
ಆಲಮೇಲ 01 : ಪಟ್ಟಣದ ತಹಶಿಲ್ದಾರರ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ರೇಣುಕಾಚಾರ್ಯ ಜಯಂತಿಯನ್ನು ಆಚರಿಸಲಾಯಿತು. ಶ್ರೀಶೈಲ ಮಠಪತಿ ಉಪನ್ಯಾಸ ನೀಡಿದರು. ಜಂಗಮ ಸಮಾಜ ಎಲ್ಲ ರೀತಿಯಿಂದಲೂ ಶೋಷಣೆಗೊಳಗಾಗುತ್ತಿದೆ, ಸಮಾಜದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಿ ಎಂದರು. ತಹಶಿಲ್ದಾರ ಮಲ್ಲಿಕಾರ್ಜುನ ಅರಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿರುಪಾಕ್ಷಯ್ಯ ಹಿರೇಮಠ, ಬಂಡಯ್ಯ ಸ್ಥಾವರಮಠ, ಶಿವಲಿಂಗಯ್ಯ ಮಠಪತಿ, ರಾಜಶೇಖರ ಘಾಳಿಮಠ, ಈರಯ್ಯ ಮಠ, ನಾಗು ಮುಳಿಮಠ ಮೊದಲಾದವರಿದ್ದರು.ರುದ್ರಯ್ಯಸ್ವಾಮಿ ಹಿರೇಮಠ ಸ್ವಾಗತಿಸಿದರು.