ಅಂತರರಾಷ್ಟ್ರೀಯ

ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ ಭೂಕಂಪನ, ಸುನಾಮಿ ಎಚ್ಚರಿಕೆಯಿಲ್ಲ

ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ  ಭೂಕಂಪನ,  ಸುನಾಮಿ ಎಚ್ಚರಿಕೆಯಿಲ್ಲ

ಮಾಸ್ಕೋ, ಫೆಬ್ರವರಿ 12: ರಷ್ಯಾದ  ಪೂರ್ವದ ಕಮ್ಚಟ್ಕಾ ಪರ್ಯಾಯ ದ್ವೀಪದ ಪೂರ್ವ ಕರಾವಳಿಯಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಷ್ಯಾದ ಅಕಾಡೆಮಿ ಆಫ್ ಸೈನ್ಸಸ್ (ಜಿಎಸ್ ಆರ್ಎಎಸ್) ನ ಭೌಗೋಳಿಕ ಸಮೀಕ್ಷೆಯ ಪ್ರಾದೇಶಿಕ ಶಾಖೆ ಗುರುವಾರ ತಿಳಿಸಿದೆ.ಉಸ್ತ್-ಕಾಮ್ಚಾಟ್ಸ್ಕ್ನ ವಸಾಹತುವಿನಿಂದ 99 ಕಿಲೋಮೀಟರ್ ದೂರದಲ್ಲಿ ಕಂಪನ ದಾಖಲಾಗಿದ್ದು,  ಕಂಪನದ ಕೇಂದ್ರ ಬಿಂದು  43 ಕಿಲೋಮೀಟರ್ ಆಳದಲ್ಲಿತ್ತು ಎನ್ನಲಾಗಿದೆ. ಆದರೆ ಕಂಪನದ ನಂತರ , ಯಾವುದೇ ಸುನಾಮಿ ಎಚ್ಚರಿಕೆಯನ್ನು ಘೋಷಣೆ  ಮಾಡಿಲ್ಲ  ಎಂದು ತುರ್ತು ಸಚಿವಾಲಯದ ಪ್ರಾದೇಶಿಕ ವಿಭಾಗದ ವಕ್ತಾರರು ತಿಳಿಸಿದ್ದಾರೆ. ಕಮ್ಚಟ್ಕಾವು ಭೂಕಂಪನದಿಂದ ಬಳಲುವ ಸಕ್ರಿಯ ವಲಯದಲ್ಲಿನ  ರಿಂಗ್ ಆಫ್ ಫೈರ್ ಎಂದು ಕರೆಯಲ್ಪಡುತ್ತಿದ್ದು, ಇಲ್ಲಿ ಪದೆ , ಪದೇ  ಭೂಕಂಪನ ವಾಗುತ್ತಿರುತ್ತದೆ ಎಂದೂ ಹೇಳಲಾಗಿದೆ. 




ಸುದ್ದಿ ಓದಿ