ಜಪಾನ್‌ನಲ್ಲಿ ಭೂಕಂಪನ, ಹಾನಿ ವರದಿಯಿಲ್ಲ
ಮಾಸ್ಕೋ, ಫೆಬ್ರವರಿ 7:ಪಶ್ಚಿಮ ಜಪಾನಿನ ಯೋನಾಗುನಿ ದ್ವೀಪದ ಕರಾವಳಿಯ ಬಳಿ ಭಾನುವಾರ ಮುಂಜಾನೆ ಭೂಕಂಪನ ಸಂಭವಿಸಿದೆ.ರಿಕ್ಟರ್ ಮಾಪನದಲ್ಲಿ ಕಂಪನದ ತೀವ್ರತೆ 5.4 ಎಂದು ದಾಖಲಾಗಿರುವುದಾಗಿ ವರದಿಯಾಗಿರುವುದಾಗಿ ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ ತಿಳಿಸಿದೆ.ಆದರೆ ಶನಿವಾರವೇ ಭೂಕಂಪನ ಮಾಹಿತಿ ದಾಖಲಾಗಿದ್ದು ಅದರ ಕೇಂದ್ರ ಬಿಂದು 67 ಮೈಲಿ ಮತ್ತು 23.6 ಮೈಲಿ ಆಳದಲ್ಲಿದತ್ತು ಎನ್ನಲಾಗಿದೆ. ಈವರೆಗಿನ ಪ್ರಾಥಮಿಕ ವರದಿಗಳ ಪ್ರಕಾರ ಸದ್ಯಕ್ಕೆ ಸುನಾಮಿ ಎಚ್ಚರಿಕೆ ಅಥವಾ ಸಾವು-ನೋವುಗಳು ಮತ್ತು ಆಸ್ತಿ-ಪಾಸ್ತಿಗಳಿಗೆ ಹಾನಿಯಾದ ಬಗ್ಗೆ ಯಾವುದೇ ಮಾಹಿತಿ ಇನ್ನೂ ಲಭ್ಯವಾಗಿಲ್ಲ .