ಅಂತರರಾಷ್ಟ್ರೀಯ

ಇಂಡೋನೇಷ್ಯಾ ಭೂಕಂಪ : ಸಾವಿನ ಸಂಖ್ಯ 96ಕ್ಕೆ ಏರಿಕೆ

ಇಂಡೋನೇಷ್ಯಾ ಭೂಕಂಪ : ಸಾವಿನ ಸಂಖ್ಯ 96ಕ್ಕೆ ಏರಿಕೆ

ಮಾಸ್ಕೋ, ಜ 18 :ಸುಲಾವೇಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪ ಮತ್ತು ದಕ್ಷಿಣ ಕಾಲಿಮಂಟನ್ ಪ್ರಾಂತ್ಯದ ಪ್ರವಾಹದಿಂದ ಇಂಡೋನೇಷ್ಯಾದ ಒಟ್ಟು ಸಾವಿನ ಸಂಖ್ಯೆ 96 ಕ್ಕೆ ಏರಿಕೆಯಾಗಿದ್ದು,  ಸುಮಾರು 70 ಸಾವಿರ ಜನರು ಮನೆಗಳನ್ನು ತೊರೆದಿದ್ದಾರೆ.  ಕಳೆದ ವಾರ ಸಂಭವಿಸಿದ 6.2 ತೀವ್ರತೆಯ ಭೂಕಂಪದಲ್ಲಿ 78 ಮಂದಿ ಸಾವನ್ನಪ್ಪಿದ್ದಾರೆ ಎಂದು ಈ ಮೊದಲು ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಮಂಡಳಿ (ಬಿಎನ್‌ಪಿಬಿ) ತಿಳಿಸಿದೆ.  ನವೀಕೃತ ಮಾಹಿತಿಯ ಪ್ರಕಾರ, ಭೂಕಂಪದಲ್ಲಿ 81 ಜನರು ಸಾವನ್ನಪ್ಪಿದ್ದಾರೆ ಮತ್ತು ದಕ್ಷಿಣ ಕಾಲಿಮಂಟನ್‌ನಲ್ಲಿ ಪ್ರವಾಹಕ್ಕೆ 15 ಜನರು ಬಲಿಯಾಗಿ, ಸುಮಾರು 25 ಸಾವಿರ ಮನೆಗಳು ಮುಳುಗಿವೆ ಮತ್ತು ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಪಶ್ಚಿಮ ಸುಲಾವೇಸಿ ಪ್ರಾಂತ್ಯದ ಸುಮಾರು 28 ಸಾವಿರ ನಿವಾಸಿಗಳನ್ನು ಸ್ಥಳಾಂತರಿ ತಾತ್ಕಾಲಿಕ ಕೇಂದ್ರಗಳಲ್ಲಿ ಇರಿಸಲಾಗಿದ್ದು, ದಕ್ಷಿಣ ಕಾಲಿಮಂಟನ್‌ನಲ್ಲಿ 40 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಬಿಎನ್‌ಪಿಬಿ ಪತ್ರಿಕಾ ಕಾರ್ಯದರ್ಶಿ ರಾಡಿತ್ಯ ಜಾತಿ ತಿಳಿಸಿದ್ದಾರೆ. ಭೂಕಂಪದಲ್ಲಿ ಐದು ಶಾಲೆಗಳು ಸೇರಿದಂತೆ 1,150 ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿವೆ ಎಂದು ಅವರು ಮಾಹಿತಿ ನಿಡಿದ್ದಾರೆ. ಸ್ಥಳಾಂತರಗೊಂಡಿರುವ ನಾಗರಿಕರಲ್ಲಿ ಕೊರೋನಾ ವೈರಸ್ ಹರಡುವ ಅಪಾಯದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ಷಿಪ್ರ ಕೋವಿಡ್ ಪರೀಕ್ಷೆಗೆ ಮುಂದಾಗಿದ್ದಾರೆ ಎಂದು ಬಿಎನ್‌ಪಿಬಿ ಮುಖ್ಯಸ್ಥ ಡೋನಿ ಮೊರಾಂಡೊ ಹೇಳಿದ್ದಾರೆ.

  


ಸುದ್ದಿ ಓದಿ