ಇಂಡೋನೇಷ್ಯಾದಲ್ಲಿ 5.8 ತೀವ್ರತೆಯ ಭೂಕಂಪನ
ಜಕಾರ್ತಾ, ಮೇ 5 :ಇಂಡೋನೇಷ್ಯಾದ ಪಶ್ಚಿಮ ಪ್ರಾಂತ್ಯದ ಪಶ್ಚಿಮ ಸುಮಾತ್ರಾ ದ್ವೀಪದಲ್ಲಿ ಭೂಕಂಪನ ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.8 ಎಂದು ದಾಖಲಾಗಿರುವುದಾಗಿ ಇಂಡೋನೇಷ್ಯಾದ ಹವಾಮಾನಶಾಸ್ತ್ರ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ತಿಳಿಸಿದೆ. ಬೆಳಗಿನ ಜಾವ ಭೂಕಂಪನ ಸಂಭವಿಸಿದೆ. ಮೆಂಟವಾಯಿ ದ್ವೀಪಗಳ ಜಿಲ್ಲೆಯ ಆಗ್ನೇಯ ತುವಾಪೆಜಾತ್ ಗ್ರಾಮದಲ್ಲಿ ಭೂಮಿ ನಡುಗಿದ ಅನುಭವವಾಗಿದೆ ಆದರೆ ಈವರೆಗೆ ಸುನಾಮಿಗೆ ಎಚ್ಚರಿಕೆ ನೀಡಲಾಗಿಲ್ಲ ಎಂದೂ ಸಂಸ್ಥೆ ಹೇಳಿದೆ.