ಹೂವಿನ ಹಡಗಲಿ

ಶರಣ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿ ಕವಿ ಟಿ.ಎಂ. ನಾಗಭೂಷಣ ಆಯ್ಕೆ

ಶರಣ ಸಾಹಿತ್ಯ ಪರಿಷತ್ತಿಗೆ  ಅಧ್ಯಕ್ಷರಾಗಿ ಕವಿ ಟಿ.ಎಂ. ನಾಗಭೂಷಣ ಆಯ್ಕೆ

ಹೂವಿನಹಡಗಲಿ  19:  ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ  ತಾಲೂಕು ಘಟಕದ ಅಧ್ಯಕ್ಷರಾಗಿ ಪಟ್ಟಣದ ಕವಿ ಟಿ. ಎಂ. ನಾಗಭೂಷಣರನ್ನು ಅವಿರೋಧ ಆಯ್ಕೆ ಮಾಡಲಾಯಿತು.ಪಟ್ಟಣದ ಗವಿಸಿದ್ದೇಶ್ವರ ಮಠದಲ್ಲಿ ಶನಿವಾರ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.    ಯುವ ಘಟಕದ ಅಧ್ಯಕ್ಷರಾಗಿ ದಯಾನಂದ ಎಂ. ಕದಳಿ ವೇದಿಕೆ ಅಧ್ಯಕ್ಷರಾಗಿ ಡಾ. ಶೈಲಜ ಪವಾಡಶೆಟ್ರ ಆಯ್ಕೆಯಾದರು.   ಸಾನಿಧ್ಯವನ್ನು  ಗವಿಸಿದ್ದೇಶ್ವರ  ಮಠದ  ಡಾ. ಹಿರಿಶಾಂತವೀರ  ಮಹಾಸ್ವಾಮಿಗಳು ವಹಿಸಿದ್ದರು.    ಅಧ್ಯಕ್ಷತೆಯನ್ನು  ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲಾಧ್ಯಕ್ಷರಾದ ಡಾ. ಕೆ. ರವೀಂದ್ರನಾಥ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಎನ್‌. ಎಂ. ರವಿಕುಮಾರ್, ಹರಪನಹಳ್ಳಿ ತಾಲೂಕಿನ ಅಧ್ಯಕ್ಷ ರಾಜಶೇಖರ ಬಣಕಾರ, ನಿಕಟ ಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ. ಎಂ. ಮಂಜುನಾಥಸ್ವಾಮಿಜಿ, ಹಿರಿಯ ಸಾಹಿತಿ ತೋ. ಮ. ಶಂಕ್ರಯ್ಯ, ಎಸ್‌. ದ್ವಾರಕೀಶ್ ರೆಡ್ಡಿ, ಪಿ. ಎಂ. ಕೊಟ್ರಸ್ವಾಮಿ, ಹೆಚ್‌. ಜಿ. ಪಾಟೀಲ್, ದಳವಾಯಿ ಹಾಲೇಶ, ಹೆಚ್‌. ಬಿ. ರಾಜಣ್ಣ, ಎಸ್‌. ಸುನೀತಾ ಇದ್ದರು. 


ಸುದ್ದಿ ಓದಿ