ಪ್ರತಿ ತಿಂಗಳೂ ವೇತನ ಕೊಡಿ ರಾಜ್ಯ ಆರೋಗ್ಯ ಸಹಾಯಕಿಯರು ಮತ್ತು ಮೇಲ್ವಿಚಾರಕರ ಬೃಹತ್ ಪ್ರತಿಭಟನೆ
ಕಾರವಾರ,24: ಆರು ತಿಂಗಳಿಗೆ ಒಮ್ಮೆ ವೇತನ ನೀಡಲಾಗುತ್ತಿದೆ. ಯಾವಾಗ ಕೇಳಿದ್ರೂ ಬಜೆಟ್ ಇಲ್ಲ. ಅನುದಾನ ಬಂದಿಲ್ಲ ಎಂದು ಕಳೆದ ಹತ್ತು ವರ್ಷಗಳಿಂದ ಹೇಳುತ್ತಿದ್ದಾರೆ. ನಮ್ಮ ಸಮಸ್ಯೆ ಅಧಿಕಾರಿಗಳ ಮತ್ತು ಸಕರ್ಾರದ ಕಣ್ಣಿಗೆ ಬಿದ್ದೇ ಇಲ್ಲ ಎಂದು ಜಿಲ್ಲೆ ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕಿಯರು ಮತ್ತು ಮೇಲ್ವಿಚಾರಕರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಬಂದಿದ್ದ ಕಿರಿಯ ಆರೋಗ್ಯ ಸಹಾಯಕರಿಯರು ಮತ್ತು ಸಹಾಯಕರು ಕಾರವಾರದ ಡಿಎಚ್ಓ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ಮಾಡಿದರು.
ಕಳೆದ ಹತ್ತು ವರ್ಷಗಳಿಂದ ಮನವಿ ನೀಡುತ್ತಾ ಬಂದೆವು. ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಹಾಗಾಗಿ ಈಗ ಮೊಟ್ಟ ಮೊದಲ ಬಾರಿಗೆ ಸಂಘಟನೆ ಮಾಡಿಕೊಂಡು ಹೋರಾಟಕ್ಕೆ ಇಳಿದಿದ್ದೇವೆ. ಇದು ಮೊದಲ ಹಂತದ ಹೋರಾಟ. ನಮಗೆ ಪ್ರತಿ ತಿಂಗಳ 5 ನೇ ತಾರಿಖಿನ ಒಳಗ ವೇತನ ನೀಡಲಿ. ಇದು ನಮ್ಮ ಪ್ರಧಾನ ಬೇಡಿಕೆ. ಕೆ 2 ಯುಗದಲ್ಲಿ ಇದ್ದೇವೆ. ಆದರೂ ನಮಗೆ ನಾಲ್ಕು ತಿಂಗಳಿಗೆ ಒಮ್ಮೆ. ಆರು ತಿಂಗಳಿಗೆ ಒಮ್ಮೆ ವೇತನ ನೀಡಲಾಗುತ್ತದೆ. ನಮ್ಮ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ ಎಂದು ಕನರ್ಾಟಕ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದ ಉತ್ತರ ಕನ್ನಡ ಶಾಲೆಯ ಜಿಲ್ಲಾಧ್ಯಕ್ಷೆ ಸುಮಂಗಲಾ ಹೆಗಡೆ ತಮ್ಮ ಅಳಲು ತೋಡಿಕೊಂಡರು. ಕಿರಿಯ ಆರೋಗ್ಯ ಸಹಾಯಕರಲ್ಲಿ ಪುರುಷರೂ ಇದ್ದಾರೆ. ಮೇಲ್ವಿಚಾರಕರು ಇದ್ದಾರೆ. ಹಿರಿಯ ಆರೋಗ್ಯ ಸಹಾಯಕರು ಇದ್ದಾರೆ. ನಾವು ಕೆಲಸ ಮಾಡುವುದು ಗ್ರಾಮಾಂತರ ಭಾಗದಲ್ಲಿ. ಅನುದಾನ ಕೊರತೆಯ ನೆಪದಲ್ಲಿ ಹಲವು ವರ್ಷಗಳಿಂದ ನಮಗೆ ಸಂಚಾರಿ ಭತ್ಯೆ ನೀಡಿಲ್ಲ ಎಂದು ಕಾಯರ್ಾಧ್ಯಕ್ಷ ನಾಗರಾಜ ಟಿ.ಹೊಸಮನಿ ಆರೋಪಿಸಿದರು. ಆರೋಗ್ಯ ಇಲಾಖೆಯ ಆಧಾರ ಸ್ತಂಭವೇ ನಾವು. ರಾಜ್ಯ ಮತ್ತು ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನವನ್ನು ಶ್ರದ್ಧೆಯಿಂದ ಮಾಡುತ್ತಿದ್ದು ಸಮಾಜದ ಆರೋಗ್ಯ ಕಾಪಾಡುತ್ತಿದ್ದೇವೆ. ತಾ.ಪಂ.ಅಡಿ ಕೆಲಸ ಮಾಡುವ ನಾವು ಆರೋಗ್ಯ ಸಹಾಯಕರ ಲೆಕ್ಕ ಶೀಷರ್ಿಕೆ 20,03 ಅಡಿ ವೇತನ ನೀಡಲಾಗುತ್ತಿದೆ. ಆದರೆ 4 ತಿಂಗಳಿಗೆ ಒಮ್ಮೆ ಅಥವಾ ಆರು ತಿಂಗಳಿಗೆ ಒಮ್ಮೆ ವೇತನ ಮಾಡಲಾಗುತ್ತಿದ್ದು, ಇದು ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ ಎಂದು ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿ ಪ್ರಧಾನ ಕಾರ್ಯದಶರ್ಿ ನಾಗಯ್ಯ ಹಿರೇಮಠ ಹೇಳಿದರು.
ನಂತರ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿ, ಪ್ರತಿ ತಿಂಗಳು ವೇತನ ಆಗುವಂತೆ ಅನುಕೂಲ ಮಾಡಿಕೊಡಿ ಎಂದು ವಿನಂತಿಸಲಾಯಿತು. ಅಲ್ಲದೇ ಪ್ರತಿ ತಿಂಗಳು ಚಾರ್ಜ ಅಲೋಯೆನ್ಸ ನೀಡಬೇಕು, ವೇತನವನ್ನು ಪ್ರತಿ ತಿಂಗಳು ಆಗುವಂತೆ ನೋಡಿಕೊಳ್ಳಬೇಕು. ಪ್ರಯಾಣ ಭತ್ತೆ ನೀಡಬೇಕು. ಆರೋಗ್ಯ ಇಲಾಖೆ ಅಥವಾ ಇತರೆ ಸಭೆಗಳಲ್ಲಿ ಪದನಾಮದಂತೆ ಆರೋಗ್ಯ ಸಹಾಯಕರು ಎಂದು ಕರೆಯಬೇಕು. ಆರೋಗ್ಯ ಸಹಾಯಕರ ಸೇವಾ ಪುಸ್ತಕವನ್ನು ದ್ವಿಪ್ರತಿಯಲ್ಲಿ ನಿರ್ವಹಿಸಬೇಕು. ಪ್ರತಿ ವರ್ಷದ ಅಂತ್ಯದಲ್ಲಿ ಆಯಾ ಸಿಬ್ಬಂದಿಗಳಿಗೆ ಸೇವಾ ಪುಸ್ತಕ ತೋರಿಸಿ ಸಹಿ ಪಡೆದುಕೊಳ್ಳಬೇಕು. ತಾಲೂಕಾ ಪರಿಶೀಲನಾ ಸಭೆಗಳಲ್ಲಿ ಎಸ್ಡಿಸಿ ಮತ್ತು ಎಫ್ಡಿಸಿ ಗುಮಾಸ್ತರು ಸಭೆಯಲ್ಲಿ ಹಾಜರಿರಲು ಸೂಚಿಸಬೇಕು. ಹೊಸದಾಗಿ ನೇಮಕವಾದ ಕಿರಿಯ ಆರೋಗ್ಯ ಸಹಾಯಕರ ವೇತನ ಬಿಡುಗಡೆಗೆ ಕ್ರಮಕೈಗೊಳ್ಳಬೇಕು, ವಿಶೇಷ ಭತ್ಯೆಯನ್ನು ಕಿರಿಯ ಮತ್ತು ಹಿರಿಯ ಆರೋಗ್ಯ ಸಹಾಯಕಿಯರಿಗೆ ನೀಡಬೇಕು, ಟೈಬಾಂಡ್ಗಳನ್ನು ಸರಿಯಾದ ಸಮಯಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನಿರ್ವಹಿಸಿ ಜಿಲ್ಲಾ ಮಟ್ಟದ ಕಚೇರಿಗೆ ಕಳುಹಿಸಬೇಕು. ಇದರಿಂದ ಬಡ್ತಿ ಮತ್ತು ಇನಕ್ರಿಮೆಂಟ್ಗಳು ಸರಿಯಾದ ಸಮಯದಲ್ಲಿ ಸಿಗುವಂಗತಾಗುತ್ತದೆ ಎಂದು ಕಿರಿಯ ಆರೋಗ್ಯ ಸಹಾಯಕಿಯರು ಜಿಲ್ಲಾಧಿಕಾರಿಗಳ ಗಮನಸೆಳದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿಲ್ಲಾ ಮಟ್ಟದಲ್ಲಿ ಬಗೆ ಹರಿಯುವ ಬೇಡಿಕೆಗಳನ್ನು ಈಡೇರಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸುವುದಾಗಿ ಹೇಳಿದರು. ಪ್ರತಿಭಟನೆಯಲ್ಲಿ ನೂರಾರು ಕಿರಿಯ ಆರೋಗ್ಯ ಸಹಾಯಕಿಯರು ಮತ್ತು ಸಹಾಯಕರು ,ಮೇಲ್ವಿಚಾರಕರು ಭಾಗವಹಿಸಿದ್ದರು.
ಬೇಡಿಕೆಯ ಮನವಿ ಸಚಿವ ದೇಶಪಾಂಡೆ, ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ, ನಿದರ್ೇಶಕರಿಗೆ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಅವರಿಗೂ ಸಹ ನೀಡಲಾಗಿದೆ.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 