ಈ ತಿಂಗಳ 25ರಂದು ಬೈಡೆನ್ ಮೊದಲ ಸುದ್ದಿಗೋಷ್ಠಿ - ಶ್ವೇತಭವನ
ವಾಷಿಂಗ್ಟನ್, ಮಾರ್ಚ್ 17: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈ ತಿಂಗಳ 25 ರಂದು ಮೊದಲ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶ್ವೇತಭವನದ ವಕ್ತಾರ ಜೆನ್ ಸಾಕಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ’ಮಾರ್ಚ್ 25 ರ ಗುರುವಾರ ಮಧ್ಯಾಹ್ನ ಅಧ್ಯಕ್ಷರಾದ ಬೈಡೆನ್ ಔಪಚಾರಿಕ ಸುದ್ದಿಗೋಷ್ಠಿಯನ್ನು ನಡೆಸಲಿದ್ದಾರೆ.’ ಎಂದು ಸಾಕಿ ತಿಳಿಸಿದ್ದಾರೆ. ಸಾರ್ವಜನಿಕರಿಂದ ದೂರವಿದ್ದು, ಅಧಿಕಾರದಲ್ಲಿದ್ದೂ ಸುದ್ದಿಗೋಷ್ಠಿ ನಡೆಸುವಲ್ಲಿ ಬೈಡೆನ್ ವಿಫಲರಾಗಿದ್ದಾರೆ ಎಂಬ ಟೀಕೆಗಳು ಕೇಳಿಬಂದಿದ್ದವು.