ಅಂತರರಾಷ್ಟ್ರೀಯ

ಫೇಸ್ ಬುಕ್‍ ಗೆ ವಾಪಸ್ಸಾಗಲು ಇಷ್ಟವಿಲ್ಲ-ಡೊನಾಲ್ಡ್ ಟ್ರಂಪ್‍

ಫೇಸ್ ಬುಕ್‍ ಗೆ ವಾಪಸ್ಸಾಗಲು ಇಷ್ಟವಿಲ್ಲ-ಡೊನಾಲ್ಡ್ ಟ್ರಂಪ್‍

ವಾಷಿಂಗ್ಟನ್‍, ಜೂನ್‍ 6:- ಸಾಮಾಜಿಕ ಮಾಧ್ಯಮ ವೇದಿಕೆಗೆ ವಾಪಸ್ಸಾಗಲು ಫೇಸ್ ಬುಕ್‍ ಸಿಇಒ ಮಾರ್ಕ್‍ ಜುಕೆರ್ ಬರ್ಗ್ ಅವಕಾಶ ನೀಡಿದರೂ ತಾವು ಮತ್ತೆ ವಾಪಸ್ಸಾಗುವುದಕ್ಕೆ ಇಷ್ಟವಿಲ್ಲವೆಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ‘ದೇಶವನ್ನು ಅಂತಹ ಮಾನವೀಯ ಗುಣಗಳಿಂದ ನಡೆಸಲು ಬಿಡುವುದಿಲ್ಲ. ಇಂತಹ ಗುಣವನ್ನು ಜುಕರ್ ಬರ್ಗ್ ಹೊಂದಿದ್ದಾರೆ. ಎರಡು ವರ್ಷಗಳ ನಂತರ ತಮಗೆ ಫೇಸ್ ಬುಕ್ ಗೆ ಮರಳಲು ಅವಕಾಶ ನೀಡುವುದಾಗಿ ಅವರು ಹೇಳುತ್ತಿದ್ದಾರೆ. ಆದರೆ ತಮಗೆ ಇಷ್ಟವಿಲ್ಲ.’ ಎಂದು ಟ್ರಂಪ್‍ ಶನಿವಾರ ಉತ್ತರ ಕರೊಲಿನಾದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಿ ಹೇಳಿದ್ದಾರೆ.  ‘ತಾವು ಅಧ್ಯಕ್ಷರಾಗಿದ್ದಾಗ ಜುಕರ್ ಬರ್ಗ್ ತಮ್ಮ ಪತ್ನಿಯೊಂದಿಗೆ ಶ್ವೇತಭವನಕ್ಕೆ ಆಗಮಿಸಿದ್ದರು. ಫೇಸ್ ಬುಕ್‍ ನಲ್ಲಿ ತಾವು ನಂಬರ್ ಒನ್ ಎಂದು ಆ ಸಂದರ್ಭದಲ್ಲಿ ಹೇಳಿದ್ದರು. ಆದರೆ, ತಾವು ಅಧಿಕಾರದಿಂದ ಇಳಿದ ತಕ್ಷಣವೇ  ಜುಕರ್ ಬರ್ಗ್ ತಮ್ಮ ಸ್ವಭಾವವನ್ನು ಬದಲಿಸಿಕೊಂಡಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ಫೇಸ್ ಬುಕ್ ಮಂದಿ ಇಡೀ ಜನಸಮೂಹದ ಅದರಲ್ಲಿ ಪ್ರಭಾವಿ ಮತ್ತು ಬಲಿಷ್ಠ ಸಮುದಾಯಗಳ ಬಾಯಿಗೆ ಬೀಗ ಹಾಕಲು ಹೊರಟಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. 

  


 

  



ಸುದ್ದಿ ಓದಿ