ಪ್ಯಾಲೆಸ್ಟೀನಿಯರಿಗಾಗಿ ಕೆನಡಾ ಆರ್ಥಿಕ ನೆರವು ಘೋಷಣೆ
ಟೊರೊಂಟೊ, ಮೇ 29 :ಇಸ್ರೇಲ್ ಸೇನೆ ಮತ್ತು ಇಸ್ಲಾಮಿಸ್ಟ್ ಹಮಾಸ್ ಉಗ್ರರ ನಡುವಿನ ಇತ್ತೀಚಿನ ಕದನದಿಂದ ತೊಂದರೆಗೆ ಒಳಗಾದ ಪ್ಯಾಲೆಸ್ಟೀನಿಯಾದ ಜನತೆಗೆ ಮಾನವೀಯ ನೆರವು ನೀಡಲು ಕೆನಡಾ ಸರ್ಕಾರ 20.7 ಮಿಲಿಯನ್ ಆರ್ಥಿಕ ನೆರವು ಘೋಷಿಸಿರುವುದಾಗಿ ಪ್ರಧಾನಿ ಜಸ್ಟಿನ್ ಟ್ರುಡೊ ಕಚೇರಿ (ಪಿಎಂಒ) ತಿಳಿಸಿದೆ. ಪ್ಯಾಲೇಸ್ಟಿನಿಯನ್ ನಾಗರಿಕರಿಗೆ ನೆರವಾಗಲು 20 ಮಿಲಿಯನ್ ಡಾಲರ್ ನೀಡುವುದಾಗಿ ಪ್ರಧಾನಿ ಘೋಷಿಸಿದ್ದಾರೆ. ಈ ನೆರವನ್ನು ವಿಶ್ವಸಂಸ್ಥೆ (ಯುಎನ್) ಏಜೆನ್ಸಿಗಳು ಮತ್ತು ಇತರ ಸಂಸ್ಥೆಗಳಿಗೆ ಒದಗಿಸಲಾಗುವುದು ಎಂದು ಪಿಎಂಒ ಕಚೇರಿ ಶುಕ್ರವಾರ ತಿಳಿಸಿದೆ. ಕೆನಡಾದ ಈ ನೆರವು ನೀರು, ಆಹಾರ ಮತ್ತು ಆಶ್ರಯದಂತಹ ತಕ್ಷಣದ ಮಾನವೀಯ ಅಗತ್ಯಗಳನ್ನು ಒಳಗೊಂಡಿದೆ, ಆದರೆ ಎರಡನೇ ಕಂತು 8.28 ಮಿಲಿಯನ್ ನಿರ್ಣಾಯಕ ಮೂಲಸೌಕರ್ಯಗಳ ಪುನರ್ನಿರ್ಮಾಣಕ್ಕೆ ಬಳಸಬೇಕು.ಶಾಂತಿ ನಿರ್ಮಾಣದ ಉಪಕ್ರಮಗಳಿಗಾಗಿ ಹೆಚ್ಚುವರಿಯಾಗಿ 4.14 ಮಿಲಿಯನ್ ನಿಗದಿಪಡಿಸಲಾಗಿದೆ. ಯುದ್ಧದಿಂದ ಹಾನಿಗೊಳಗಾದ ಗಾಜಾ ಪಟ್ಟಿ ಮತ್ತು ವೆಸ್ಟ್ ಬ್ಯಾಂಕ್ ಎರಡನ್ನೂ ಗಮನದಲ್ಲಿ ಇಟ್ಟುಕೊಂಡು ಈ ನೆರವು ನೀಡಲಾಗುತ್ತಿದೆ ಎಂದೂ ಹೇಳಲಾಗಿದೆ.