ಅಂತರರಾಷ್ಟ್ರೀಯ

ಉತ್ತರ ಕೊರಿಯಾಕ್ಕೆ ಸುಂಗ್ ಕಿಮ್ ಅಮೆರಿಕ ವಿಶೇಷ ರಾಯಭಾರಿ

ಉತ್ತರ ಕೊರಿಯಾಕ್ಕೆ ಸುಂಗ್ ಕಿಮ್   ಅಮೆರಿಕ ವಿಶೇಷ ರಾಯಭಾರಿ

ವಾಷಿಂಗ್ಟನ್, ಮೇ 22: ಸುಂಗ್ ಕಿಮ್ ಅವರನ್ನು ಉತ್ತರ ಕೊರಿಯಾದಲ್ಲಿನ   (ಡಿಪಿಆರ್‌ಕೆ)ಅಮೆರಿಕ  ವಿಶೇಷ ರಾಯಭಾರಿಯನ್ನಾಗಿ  ಅಧ್ಯಕ್ಷ ಜೋ ಬೈಡೆನ್   ನೇಮಕ ಮಾಡಿದ್ದಾರೆ. "ಆಳವಾದ ರಾಯಭಾರ  ಪರಿಣತಿ ಹೊಂದಿರುವ  ಸುಂಗ್ ಕಿಮ್ ಡಿಪಿಆರ್ಕೆ [ಉತ್ತರ ಕೊರಿಯಾ] ಅಮೆರಿಕದ ವಿಶೇಷ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ ಎಂದು ಹೇಳಿದರು. ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ ಅವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬೈಡೆನ್ ಈ ವಿಷಯ ತಿಳಿಸಿದರು. "ಕೊರಿಯಾದ ಪರ್ಯಾಯ ಅಣ್ವಸ್ತ್ರೀಕರಣದ ನಮ್ಮ ಅಂತಿಮ ಗುರಿಯತ್ತ ಸಾಗುತ್ತಿರುವಾಗ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪ್ರಾಯೋಗಿಕ ಕ್ರಮ ತೆಗೆದುಕೊಳ್ಳಲು ಸಹಾಯಕವಾಗುವಂತೆ ಹಾಗೂ ಉತ್ತರ ಕೊರಿಯಾದೊಂದಿಗೆ ರಾಜತಾಂತ್ರಿಕವಾಗಿ ತೊಡಗಿಸಿಕೊಳ್ಳಲು ಈ ನೇಮಕ ಮಾಡಲಾಗಿದೆ ಎಂದು ಬೈಡೆನ್ ಪ್ರಕಟಿಸಿದರು. 

ಸುದ್ದಿ ಓದಿ