ಮೆಲಿಂಡಾ - ಬಿಲ್ ಗೇಟ್ಸ್ 27 ವರ್ಷಗಳ ವೈವಾಹಿಕ ಜೀವನ ಅಂತ್ಯ
ಸಿಯಾಟಲ್, ಮೇ 4 : ಒಂದು ಕಾಲದ ವಿಶ್ವದ ಕುಬೇರ ಎನಿಸಿಕೊಂಡಿದ್ದ, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಪತ್ನಿ ಮೆಲಿಂಡಾ ಗೇಟ್ಸ್ 27 ವರ್ಷಗಳ ನಂತರ ವಿವಾಹ ಜೀವನದಿಂದ ಬೇರೆಯಾಗಲು ತೀರ್ಮಾನಿಸಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆಯಲು ಸಮ್ಮತಿಸಿದ್ದಾರೆ. ಈ ನಡುವೆ ಇಬ್ಬರ ನಡುವೆ ನಡೆದಿರುವ ಹಣಕಾಸಿನ ಮಾಹಿತಿಗಳು ಮಾತ್ರ ಇನ್ನೂ ಅಧಿಕೃತವಾಗಿ ದೊರಕಿಲ್ಲ ಆದರೆ ಗೇಟ್ಸ್ ಫೌಂಡೇಶನ್ನಲ್ಲಿ ಇಬ್ಬರು ಮುಂದೆಯೂ ಒಟ್ಟಾಗಿ ಕೆಲಸ ಮಾಡುವುದು ಮುಂದುವರಿಯಲಿದೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಮತ್ತು ಮಾಜಿ ಸಿಇಒ ಬಿಲ್ ಗೇಟ್ಸ್ ಹೇಳಿಕೊಂಡಿದ್ದಾರೆ. ವಿಶ್ವದ ಶೀಮಂತ ದಂಪತಿಗಳಲ್ಲಿ ಒಬ್ಬರಾಗಿದ್ದ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಪರಸ್ಪರ ಸಮ್ಮತಿಯೊಂದಿಗೆ ಟ್ವೀಟ್ ಮೂಲಕ ವಿಚ್ಚೇದನ ಪಡೆದಿರುವುದಾಗಿ ತಿಳಿಸಿದ್ದಾರೆ.ಈ ಸಂಬಂಧ ಟ್ವೀಟ್ ಮಾಡಿರುವ ಬಿಲ್ ಗೇಟ್ಸ್, ಬಹಳ ಅಲೋಚನೆ ನಂತರ ಇಬ್ಬರೂ ದಾಂಪತ್ಯದಿಂದ ಬೇರೆ ಬೇರೆಯಾಗುತ್ತಿದ್ದೇವೆ.. ಜೊತೆಗೆ ಜೀವನದ ಮುಂದಿನ ಘಟ್ಟದಲ್ಲಿ ದಂಪತಿಯಾಗಿ ಒಟ್ಟಿಗೇ ಮುಂದುವರಿಯುವುದು ಅಸಾಧ್ಯ ಎಂದು ಮನಗಂಡು ಈ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ.