ಜಾಂಬಿಯಾ ಮೊದಲ ಅಧ್ಯಕ್ಷ ಕೆನ್ನತ್‌ಕೌಂಡಾ ನಿಧನ; ಮೋದಿ ಸಂತಾಪ
ಲುಸಾಕಾ, ಜೂನ್ 18: ಜಾಂಬಿಯಾ ದೇಶದ ಮೊದಲ ಅಧ್ಯಕ್ಷ ಕೆನ್ನೆತ್ ಕೌಂಡಾ ನಿಧನ ಹೊಂದಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು. ಅನಾರೋಗ್ಯ ಕಾರಣದಿಂದ ಗುರುವಾರ ನಿಧನಹೊಂದಿದ್ದಾರೆ ಎಂದು ಜಾಂಬಿಯಾ ಅಧ್ಯಕ್ಷ ಎಡ್ಗರ್ ಲುಂಗು ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಕೆನ್ನತ್‌ಕೌಂಡಾ ಅವರ ಗೌರವಾರ್ಥ ಜಾಂಬಿಯಾ ದೇಶಾದ್ಯಂತ 21 ದಿನಗಳ ಕಾಲ ಶೋಕಾಚರಣೆ ಘೋಷಿಸಿದ್ದಾರೆ. ಕೌಂಡಾ ಅವರ ನಿಧನಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕೌಂಡಾ ಗೌರವಾನ್ವಿತ ವಿಶ್ವ ನಾಯಕ, ರಾಜಕಾರಣಿ ಎಂದು ಗುಣಗಾನ ಮಾಡಿದ್ದಾರೆ. ಕೌಂಡಾ ಅವರ ಸಾವಿಗೆ ಬಗ್ಗೆ ಅವರ ಪುತ್ರ ಕಮರಂಗೆ ಕೌಂಡಾ : "ನಾವು ನಮ್ಮ ತಂದೆಯನ್ನು ಕಳೆದುಕೊಂಡಿದ್ದೇವೆ ಎಂದು ಹೇಳಲು ತೀವ್ರ ದುಃಖವಾಗುತ್ತಿದೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.