ಸದ್ಯದಲ್ಲಿಯೇ ಮದುಮಗಳಾಗಲಿರುವ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ….!
ಆಕ್ಲೆಂಡ್, ಮೇ 5: ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರಿಗೆ ಮದುವೆ ಮಾಡಿಕೊಳ್ಳಲು ಸಮಯವೇ ಸಿಗುತ್ತಿಲ್ಲವಂತೆ. ಕಳೆದ ಎರಡು ವರ್ಷಗಳಿಂದ ಆಕೆ ತಮ್ಮ ವಿವಾಹವನ್ನು ಮುಂದೂಡುಕೊಂಡುಬರುತ್ತಿದ್ದಾರೆ. ಈ ಕ್ರಮವಾಗಿ ಏನೇ ಆದರೂ ಈ ವರ್ಷ ಮದುವೆಮಾಡಿಕೊಳ್ಳಲೇಬೇಕು ಎಂದು ಜೆಸಿಂಡಾ ಗಟ್ಟಿ ನಿರ್ಧರ ಕೈಗೊಂಡಿದ್ದಾರೆ.ಈ ಬೇಸಿಗೆಯಲ್ಲಿ ವಿವಾಹ ಮಾಡಿಕೊಳ್ಳಲು ಜಿಸಿಂಡಾ ಸಿದ್ದರಾಗುತ್ತಿದ್ದಾರೆ. ಆದರೆ, ದಿನಾಂಕ ಹಾಗೂ ಸಮಯ ಇನ್ನೂ ನಿಶ್ಚಯಗೊಂಡಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. " ಜಸಿಂಡಾ ಕೋಸ್ಟ್ ರೇಡಿಯೊ ಜೊತೆ ಮಾತನಾಡಿ ಈಗ ನನಗೆ ಮದುವೆ ಸಮಯ ಕೂಡಿಬಂದಿದೆ. ಈ ಬೇಸಿಗೆಯಲ್ಲಿ ನಾನು, ನನ್ನ ಸ್ನೇಹಿತ ಕ್ಲಾರ್ಕ್ ಗೇಫೋರ್ಡ್ ವಿವಾಹವಾಗಲು ನಿರ್ಧರಿಸಿದ್ದೇವೆ. ಸಮಯ ಹಾಗೂ ದಿನಾಂಕ ಇನ್ನೂ ನಿಗದಿಪಡಿಸಿಲ್ಲ. ಯಾರಿಗೂ ಹೇಳದೆ ಮದುವೆಯಾಗಲು ಬಯಸುವುದಿಲ್ಲ.
ಕೆಲವು ಜನರನ್ನು ನಾವು ವಿವಾಹಕ್ಕೆ ಆಹ್ವಾನಿಸಬೇಕು ಎಂದು ಪ್ರಧಾನಿ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನೂ ಜಸಿಂಡಾ ಅರ್ಡೆರ್ನ್ (40) ಹಾಗೂ ಕ್ಲಾರ್ಕ್ (44) 2019 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ವರ್ಷದ ಈಸ್ಟರ್ ರಜಾದಿನಗಳಲ್ಲಿ ಅವರು ನಿಶ್ಚಿತಾರ್ಥ ನಡೆಸಿಕೊಂಡಿದ್ದರು. ಪ್ರಸ್ತುತ ಜೋಡಿ ಎರಡು ವರ್ಷದ ಮಗಳನ್ನು ಹೊಂದಿದೆ. ಆದರೆ, ಜೋಡಿ ಇನ್ನೂ ಮದುವೆಯಾಗಿಲ್ಲ. ಮದುವೆಯನ್ನು ವಿವಿಧ ಕಾರಣಗಳಿಗಾಗಿ ಮುಂದೂಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಏನೇ ಆದರೂ ಈ ಬೇಸಿಗೆಯಲ್ಲಿ ಮದುವೆ ಮಾಡಿಕೊಳ್ಳಲು ಜಸಿಂಡಾ ನಿರ್ಧರಿಸಿದ್ದಾರೆ. ದಕ್ಷಿಣ ಗೋಳಾರ್ಧದಲ್ಲಿ ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಬೇಸಿಗೆ ಕಾಲವಾಗಲಿದೆ ಆ ಸಮಯದಲ್ಲಿ ಜಸಿಂಡಾ ವಿವಾಹ ಇರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇನ್ನು ಮುಂದೆ ಸಾಂಪ್ರದಾಯಿಕವಾಗಿ ನಡೆಯುವುದಿಲ್ಲ ಎಂದು ಹಾಗೆ ಮಾಡಲು ತಾವು ಬಯಸುವುದಿಲ್ಲ ಎಂದು ಜೆಸಿಂಡಾ ಸ್ಪಷ್ಟಪಡಿಸಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ. ಜಸಿಂಡಾ 2017 ರಲ್ಲಿ ನ್ಯೂಜಿಲೆಂಡ್ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರಕ್ಕೆ ಮರಳಿದರು. ಜಸಿಂಡಾ ಅವರು ಪ್ರಧಾನ ಮಂತ್ರಿಯಾಗಿದ್ದ ಸಮಯದಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಕೋವಿಡ್ ನಿಯಂತ್ರಿಸುವಲ್ಲಿ ಜಸಿಂಡಾ ವಿಶ್ವದ ನಾಯಕರಿಗೆ ಸ್ಫೂರ್ತಿಯಾಗಿದ್ದಾರೆ.