ಅಂಗಾರಕನ ಅಂಗಳದಲ್ಲಿ ಮೊದಲ ಹಾರಾಟ ನಡೆಸಲಿರುವ ನಾಸಾ ಹೆಲಿಕಾಪ್ಟರ್…!
ವಾಷಿಂಗ್ಟನ್, ಏ 7: ಮಂಗಳ ಗ್ರಹ ಮೇಲ್ಮೈನಲ್ಲಿ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ (ನಾಸಾ) ಕಳುಹಿಸಿರುವ “ಇನ್‌ಜೆನ್ಯುಟಿ” ಹೆಲಿಕಾಪ್ಟರ್ ಅಲ್ಲಿ ಕಠಿಣ ಹವಾಮಾನ ಎದುರಿಸಿ ಉಳಿದುಕೊಂಡಿದೆ. ಸಾಂದ್ರತೆಯ ಕಡಿಮೆ ಇರುವ ಅಲ್ಲಿನ ಗಾಳಿಯಲ್ಲಿ ಗಗನ ವಿಹಾರ ನಡೆಸಲು ಹೆಲಿಕಾಪ್ಟರ್‌ತಯಾರಿ ನಡೆಸುತ್ತಿರುವ ಹಿನ್ನಲೆಯಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಎಂದು ನಾಸಾ ಹೇಳಿದೆ. ಪರ್ಸವರೆನ್ಸ್ ರೋವರ್ ನೊಳಗೆ ಇನ್‌ಜೆನ್ಯುಟಿ ಹೆಲಿಕಾಪ್ಟರ್ ಅನ್ನು ಮಂಗಳ ಗ್ರಹಕ್ಕೆ ಕಳುಹಿಸಿದ್ದಾರೆ. ರೋವರ್ ಫೆಬ್ರವರಿ 18 ರಂದು ಮಂಗಳ ಗ್ರಹದ ಮೇಲಿರುವ ಜೆಜೆರ್ ಬಿಲದಲ್ಲಿ ಇಳಿದಿತ್ತು. ಶನಿವಾರ ಇನ್‌ಜೆನ್ಯುಟಿ ರೋವರ್‌ನಿಂದ ಹೊರಬಂದ ಹೆಲಿಕಾಪ್ಟರ್.. ಯಶಸ್ವಿಯಾಗಿ ಮಂಗಳದ ಕಾಲಿರಿಸಿದೆ. ನಂತರ ರೋವರ್‌ನಿಂದ ಯಾವುದೇ ಬೆಂಬಲ ವಿಲ್ಲದೆ ಅಲ್ಲಿನ ಕಠಿಣ ವಾತಾವಾರಣವನ್ನು ಸಮರ್ಥವಾಗಿ ಎದುರಿಸಿ ನಿಂತಿದೆ ಎಂದು ನಾಸಾ ಪ್ರಕಟಿಸಿದೆ.
ಮಂಗಳ ಗ್ರಹದಲ್ಲಿ ರಾತ್ರಿ ವೇಳೆ ತೀವ್ರ ಚಳಿಯ ವಾತಾವರಣ ಇರಲಿದ್ದು, ಉಷ್ಣಾಂಶ ಮೈನಸ್ 90 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಹೆಲಿಕಾಪ್ಟರ್ ಅದನ್ನು ಯಶಸ್ವಿಯಾಗಿ ನಿಭಾಯಿಸಿದೆ ಎಂದು ನಾಸಾ ಹೇಳಿದೆ. ತೀವ್ರ ಚಳಿಯ ವಾತಾವರಣದಿಂದ ಎಂಜಿನ್ ನಲ್ಲಿರುವ ಪ್ರಮುಖ ವಿದ್ಯುತ್ ಉಪಕರಣಗಳಿಗೆ ಹಾನಿಯಾಗದಂತೆ ತಡೆಯಲು ವಿಜ್ಞಾನಿಗಳು ಹೀಟರ್ ಅಳವಡಿಸಿದ್ದಾರೆ. ಇದು ಸೌರಶಕ್ತಿ ಚಾಲಿತ ಬ್ಯಾಟರಿಯಿಂದ ನಿಯಂತ್ರಿಸಲಿದೆ. "ಹೆಲಿಕಾಪ್ಟರ್‌ನಲ್ಲಿರುವ ಎಲ್ಲಾ ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ" ಎಂದು ಇನ್‌ಜ್ಯುನಿಟ್ ಯೋಜನಾ ವ್ಯವಸ್ಥಾಪಕ ಮಿಮಿ ಆಂಗ್ ಹೇಳಿದ್ದಾರೆ. ಎಲ್ಲವೂ ಯೋಜಿಸಿದಂತೆ ನಡೆದರೆ, ಈ ತಿಂಗಳ 11 ರಂದು ಮಂಗಳ ಗ್ರಹದ ವಾತಾವರಣದಲ್ಲಿ ತನ್ನ ಮೊದಲ ಬಾಹ್ಯಾಕಾಶ ಯಾನ ನಡೆಸಲಿದೆ. ಭೂಮಿಯ ಹೊರಗಿನ ಗ್ರಹದಲ್ಲಿ ಹೆಲಿಕಾಪ್ಟರ್‌ಹಾರಾಟ ನಡೆಸುತ್ತಿರುವುದು ಇದೇ ಮೊದಲು. ಈ ಉಪಕ್ರಮ ಮೊದಲ ಮಾನವಸಹಿತ ಬಾಹ್ಯಾಕಾಶ ಹಾರಾಟದ 60 ನೇ ವಾರ್ಷಿಕೋತ್ಸವ ಹಾಗೂ ಕೊಲಂಬಿಯಾ ಬಾಹ್ಯಾಕಾಶ ನೌಕೆಯ ಮೊದಲ ಹಾರಾಟದ 40 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆಯುತ್ತಿರುವುದು ಮಹತ್ವಪಡೆದುಕೊಂಡಿದೆ.
1.8 ಕೆಜಿ ತೂಕದ ಇನ್‌ಜೆನ್ಯುಟಿ .. ಮೊದಲ ಪ್ರಯತ್ನದಲ್ಲಿ ಅದು ಸೆಕೆಂಡಿಗೆ ಮೂರು ಅಡಿ ವೇಗದದೊಂದಿಗೆ ಮೇಲೆಳಲಿದೆ. ಒಟ್ಟು 30 ಸೆಕೆಂಡುಗಳ ಕಾಲ ಹಾರಾಟ ನಡೆಸಲಿದೆ. ಈ ಕ್ರಮದಲ್ಲಿ ಅಕಾಶದಿಂದ ಮಂಗಳದ ಮೇಲ್ಮೈನ ಫೊಟೋಗಳನ್ನು ತೆಗೆಯಲಿದೆ. 1903 ರಲ್ಲಿ ರೈಟ್ ಸಹೋದರರು ತಮ್ಮ ಮೊದಲ ವಿಮಾನದ ರೆಕ್ಕೆಗಳಲ್ಲಿ ಬಳಸಿದ ಬಟ್ಟೆಯ ತುಂಡನ್ನು ಇನ್‌ಜೆನ್ಯೂಟಿಯಲ್ಲಿ ಇರಿಸಿದ್ದಾರೆ.