ಮಾತೃಭಾಷೆ ಸಂರಕ್ಷಣೆ ಅತ್ಯಗತ್ಯ: ಕುಮಾರಚಲ್ಯೆ
ಲೋಕದರ್ಶನವರದಿ
ಹಾವೇರಿ21: ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯತೆಯ ಪ್ರತೀಕವಾದ ಮಾತೃ ಭಾಷೆ ಸಮಾಜದ ಪ್ರಭಾವಿ ಅಸ್ತ್ರವಾಗಿ ಪರಿಣಮಿಸಿದೆ. ಇಂತಹ ಭವ್ಯ ಪರಂಪರಾಗತ ಮಾತೃಭಾಷೆ ಸಂರಕ್ಷಣೆ ಅತ್ಯಗತ್ಯ ಎಂದು ಹೇಳಿದರು.
ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಕನ್ನಡ ವಿಭಾಗವು ಆಯೋಜಿಸಿದ "ಅಂತರರಾಷ್ಟ್ರೀಯ ಮಾತೃ ಭಾಷಾ ದಿನ" ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಸಿ.ಎಸ್. ಶಿವಕುಮಾರಸ್ವಾಮಿ ಮಾತನಾಡುತ್ತಿದ್ದರು.
ಬಹುಸಂಸ್ಕೃತಿಯ ಬೀಡಾದ ಭಾರತದಂತ ದೇಶದಲ್ಲಿ ಪ್ರಾದೇಶಿಕ ಭಾಷೆಗಳು ಹಲವಾರು ಕಾರಣಗಳಿಂದ ಇಂದು ಮೂಲೆಗುಂಪಾಗುತ್ತಿದ್ದು ಅವುಗಳ ಸಂರಕ್ಷಣೆ ಅಗತ್ಯ ಎಂದರು. ಪ್ರಪಂಚದಾದ್ಯಂತ ಶೇ. 63ರಷ್ಟು ಮಾತನಾಡುವ ಭಾಷೆಗಳಿದ್ದು ಅವುಗಳಲ್ಲಿ ಶೇ.43ರಷ್ಟು ಭಾಷೆಗಳು ಅಳಿವಿನ ಅಂಚಿನಲ್ಲಿವೆ.
ಇದನ್ನು ಮನಗಂಡ ಯುನೆಸ್ಕೊ 1999ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾದೇಶಿಕ ಭಾಷೆಗಳ ಅರಿವು ಮತ್ತು ರಕ್ಷಣೆಯ ಜವಾಬ್ದಾರಿಯನ್ನು ಜನತೆಗೆ ನೀಡಿದೆ ಎಂದು ಹೇಳಿದರು. ಸುಮಾರ 36 ಬಿಲಿಯನ್ ಜನ ಮಾತನಾಡುವ ಕನ್ನಡ ಮಾತೃಭಾಷೆಯನ್ನು ಎಲ್ಲರೂ ಮಾತನಾಡುವ ಮೂಲಕ ಬೆಳೆಸಬೇಕು ಎಂದು ಕರೆಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಮ್.ಎಸ್. ಯರಗೊಪ ಮಾತನಾಡುತ್ತಾ ಇದೊಂದು ಅಚ್ಚುಕಟ್ಟಾದ ಯಶಸ್ವಿ ಕಾರ್ಯಕ್ರಮವಾಗಿದ್ದು ಭಾಷೆ ಒಂದು ಸಂಕೀರ್ಣ ವ್ಯವಸ್ಥೆ, ಪ್ರೀತಿ, ಅಭಿಮಾನ ಮತ್ತು ಅರ್ಥಪಡಿಸುವ ಶಕ್ತಿ ಮಾತೃಭಾಷೆಗೆ ಇದೆ. ಬಾಂಗ್ಲಾದೇಶದ ಮೂರು ಜನ ಯುವಕರ ತ್ಯಾಗವೇ ಇಂದು ನಮಗೆ ಆದರ್ಶವಾಗಿದೆ. ಇಂಥಹ ಕಾರ್ಯಕ್ರಮಗಳನ್ನು ವಿದ್ಯಾಥರ್ಿಗಳು ಸದುಪಯೋಗ ಪಡೆಸಿಕೊಳ್ಳಲು ಕಿವಿ ಮಾತು ಹೇಳಿದರು.
ಸಮಾರಂಭದಲ್ಲಿ ಗಣ್ಯಮಾನ್ಯರು ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾಥರ್ಿ-ವಿದ್ಯಾಥರ್ಿನಿಯರು ಹಾಜರಿದ್ದರು. ಆರಂಭದಲ್ಲಿ ವಾಣಿಶ್ರೀ ಸವಣೂರ ಪ್ರಾಥರ್ಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜೆ.ಎಫ್. ಹೊಸಮನಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ.ಪೂ. ಪ್ರಾಚಾರ್ಯ ಪ್ರೊ. ಜೆ. ಆರ್. ಶಿಂಧೆ ವಂದಿಸಿದರು. ಶ್ರೀದೇವಿ ದೊಡ್ಡಮನಿ ನಿರೂಪಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 