ಚುನಾವಣೆ ನೊಂದಣಿ ಫೀ ಇಳಿಸಲು ಅಲ್ಪಸಂಖ್ಯಾತರ ಮನವಿ
Minorities appeal to reduce election registration fee
ಹಾವೇರಿ 13: ಶಹರದ ಅಂಜುಮನ್ ಏ ಇಸ್ಲಾಂನ ಚುನಾವಣೆಯ ಮತ ನೊಂದಣಿ ಫೀಯನ್ನು ಕಡಿಮೆಗೊಳಿಸಬೇಕು ಎಂದು ಒತ್ತಾಯಿಸಿ ಮುಸ್ಲಿಂ ಸಮುದಾಯದವರು ಮತ ನೋಂದಣಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮುಸ್ಲಿಂ ಸಮಾಜದಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರು, ಸಣ್ಣ ಪುಟ್ಟ ವ್ಯಾಪಾರಸ್ಥರು ಆಗಿರುವುದರಿಂದ ಫೀಯನ್ನು ಬಹಳ ಆಗುತ್ತಿರುವುದರಿಂದ ಚುನಾವಣೆಯಿಂದ ದೂರ ಉಳಿಯುವ ಸಾದ್ಯತೆ ಇರುತ್ತದೆ. ಫೀಯನ್ನು ಕಡಿಮೆ ಮಾಡಿದ್ದಲ್ಲಿ ಹೆಚ್ಚಿನ ಮತದಾರರು ನೊಂದಣಿ ಮಾಡಲು ಅನುಕೂಲವಾಗುತ್ತದೆ.
ಕೂಡಲೇ ತಾವು ಸದರಿ ಚುನಾವಣೆಯ ನೊಂದಣಿ ಫೀಯನ್ನು 100/- ಕ್ಕೆ ನಿಗದಿಪಡಿಸಬೇಕು ಹಾಗೂ ಸದರಿ ಮತದಾನ ಮಾಡಲು ಪೋಸ್ಟ ಮೂಲಕ ಮತವನ್ನು ಚಲಾಯಿಸಲು ಅನುಕೂಲ ಮಾಡಿಕೊಡಬೇಕು. ಅದೇ ರೀತಿ ಹಾವೇರಿ ಶಹರದಲ್ಲಿ ಮುಸ್ಲಿಂ ಸಮಾಜದವರನ್ನು ಅತೀ ಹೆಚ್ಚು ಮತದಾನ ಮಾಡಲು ಜಾಗೃತಿ ಮೂಡಿಸಲು ಮುಂದಾಗಬೇಕು. ಸೋಶೀಯಲ್ ಮಿಡಿಯಾದಲ್ಲಿ ಜಾಗೃತಿ ಮೂಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಮುಖಂಡರಾದ ಅಮೀರ್ ಜಾನ ಬೇಪಾರಿ, ಶಾಹೀದ ದೇವಿಹೂಸೂರ,ನವೀದ ಅಮ್ಮಿನಬಾವಿ,ಅಬ್ದುಲ್ ರಶೀದ ಮಕಾಂದಾರ,ನಹೀಮ ಹುಲಗೂರ,ರಶೀದ ಹುಲಗೂರ, ಶಾನವಾಜ ಅಮ್ಮಿನಬಾವಿ, ಆತೀಪ ಪಠವೇಗಾರ ಸೇರಿದಂತೆ ಅನೇಕರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 