ಆಂಗ್ ಸಾನ್ ಸೂಕಿ ಬಂಧನ, ಮ್ಯಾನ್ಮಾರ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಮಾಸ್ಕೋ ಫೆಬ್ರವರಿ 1 : ಮ್ಯಾನ್ಮಾರ್‌ನ ಪ್ರಮುಖ ರಾಜಕೀಯ ದುರೀಣೆ, ರಾಜ್ಯ ಸಲಹೆಗಾರ ಆಂಗ್ ಸಾನ್ ಸೂಕಿ , ಹಾಗೂ ಅಧ್ಯಕ್ಷ ವಿನ್ ಮೈಂಟ್ ಅವರನ್ನು ಬಂಧಿಸಲಾಗಿದೆ ಎಂದು ರಾಯಿಟರ್ಸ್ ವರದಿ ಸೋಮವಾರ ಮಾಡಿದೆ.ದೇಶದ ಆಡಳಿತ ಪಕ್ಷದ ಇತರ ಸದಸ್ಯರನ್ನು ಮುಂಜಾನೆ ನಡೆಸಿದ ದಾಳಿಯಲ್ಲಿ ಬಂಧಿಸಲಾಗಿದೆ ಎಂದು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ವಕ್ತಾರ ಮೈಯೊ ನ್ಯುಂಟ್ ಹೇಳಿದ್ದಾರೆ. ಆಂಗ್ ಸಾನ್ ಸೂಕಿ ಮತ್ತು ಅಧ್ಯಕ್ಷ ವಿನ್ ಮೈಂಟ್ ಮತ್ತು ಆಡಳಿತ ಪಕ್ಷದ ಇತರ ಸದಸ್ಯರನ್ನು ಬಂಧಿಸಿದ ನಂತರ ಮ್ಯಾನ್ಮಾರ್ ಮಿಲಿಟರಿ ಒಂದು ವರ್ಷದ ಅವಧಿಗೆ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಜೋ ಬಿಡನ್‌ಗೆ ಮ್ಯಾನ್ಮಾರ್‌ನ ಪರಿಸ್ಥಿತಿಯ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ವಿವರಿಸಿದ್ದಾರೆ ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ. ಬಂಧಿತರನ್ನು ಬಿಡುಗಡೆ ಮಾಡುವಂತೆ ಅಮೆರಿಕ ಮ್ಯಾನ್ಮಾರ್‌ನ ಮಿಲಿಟರಿಗೆ ಕರೆ ನೀಡಿದೆ. ಮತತು ಇದಕ್ಕೆ ಕಾರಣರಾದವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಎಚ್ಚರಿಕೆ ನೀಡಿದೆ.