ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಿದ ಶಾಸಕ ನಾಡಗೌಡ
MLA Nadagowda distributes three-wheelers to the disabled
ತಾಳೆಕೋಟಿ 24: ತಾಲೂಕು ಪಂಚಾಯತ್ ವತಿಯಿಂದ ವಿಕಲಚೇತನರಿಗೆ 2024 ನೇ ಸಾಲಿನ ಅನುದಾನದ ಮೂರು ತ್ರಿಚಕ್ರ ವಾಹನಗಳನ್ನು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡರು ಫಲಾನುಭವಿಗಳಿಗೆ ಮಂಗಳವಾರ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇವತ್ತು ತಾಲೂಕ ಪಂಚಾಯತ್ ವತಿಯಿಂದ 2024ನೇ ಸಾಲಿನ ಅನುದಾನದಲ್ಲಿ ವಿಕಲಚೇತನ ಫಲಾನುಭವಿಗಳಿಗೆ ಮಂಜೂರಾದ ಮೂರು ತ್ರಿಚಕ್ರ ವಾಹನಗಳ ಪೈಕಿ ವುಳಿದ ವಾಹನಗಳನ್ನು ವಿತರಿಸಿದ್ದೇನೆ ಇದರ ಸದ್ಬಳಕೆಯನ್ನು ಅವರು ಮಾಡಿಕೊಳ್ಳಬೇಕೆಂದು ತಿಳಿಸುತ್ತೇನೆ ಎಂದರು.ಈ ಸಮಯದಲ್ಲಿ ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ತಾಪಂ ಇಓ ಅನುಸೂಯಾ ಚಲವಾದಿ, ಮುಖಂಡರಾದ ಸಿದ್ದನಗೌಡ ಪಾಟೀಲ ನಾವದಗಿ, ಪ್ರಭುಗೌಡ ಮದರಕಲ್ಲ, ಸಂಗಮೇಶ ದೇಸಾಯಿ, ರೋಷನ್ ಡೋಣಿ, ಸಂಗನಗೌಡ ಅಸ್ಕಿ, ಆರೀಫ ಕೆಂಭಾವಿ, ತಾಪಂನ ಬಸನಗೌಡ ಚೌಧರಿ, ಮಹಾಂತಗೌಡ ದೊರೇಗೋಳ ಹಾಗೂ ಸಿಬ್ಬಂದಿಗಳು ಇದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 