ಜೋ ಬೈಡೆನ್ ಪದಗ್ರಹಣ ಸಮಾರಂಭದಲ್ಲಿ ಉಪಾಧ್ಯಕ್ಷ ಪೆನ್ಸ್ ಭಾಗಿ
ಮಾಸ್ಕೋ, ಜನವರಿ 10: ಇದೇ 20 ರಂದು ವಿಶ್ವದ ದೊಡ್ಡಣ್ಣ, ಅಮೆರಿಕದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿರುವ ಜೋ ಬೈಡೆನ್ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಹಾಲಿ ಉಪಾಧ್ಯಕ್ಷ ಮೈಕ್ ಪೆನ್ಸ್ ಭಾಗಿಯಾಗಲಿದ್ದಾರೆ. ಪದಗ್ರಹಣ ಸಮಾರಭಕ್ಕೆ ಹೋಗುವುದಿಲ್ಲ ಎಂದು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮೊದಲು, ಬೈಡೆನ್ ಬೈಡನ್ ಉದ್ಘಾಟನಾ ಸಮಾರಂಭಕ್ಕೆ ಪೆನ್ಸ್ ಅವರನ್ನು ಆಹ್ವಾನಿಸಿದ್ದಾರೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮಾರಂಭದಿಂದ ದೂರವಿರುವ ತೀರ್ಮಾನ ತೆಗೆದುಕೊಂಡಿರುವುದು ಬಹಳ ಒಳ್ಳೆಯದೆ ಆಗಿದೆ ಬೈಡೆನ್ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.ಪದಗ್ರಹಣ ಕಾರ್ಯಕ್ರಮ ಇದೇ 20 ಕ್ಕೆ ನಿಗದಿಯಾಗಿದೆ.