ಅಂತರರಾಷ್ಟ್ರೀಯ

ಮೈಕ್ರೋಸಾಫ್ಟ್ ಕಂಪನಿಗೆ ಸತ್ಯ ನಾದೆಲ್ಲ ಹೊಸ ಅಧ್ಯಕ್ಷ

ಮೈಕ್ರೋಸಾಫ್ಟ್ ಕಂಪನಿಗೆ  ಸತ್ಯ ನಾದೆಲ್ಲ   ಹೊಸ ಅಧ್ಯಕ್ಷ

ವಾಷಿಂಗ್ಟನ್,  ಜೂನ್ 17 : ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಸತ್ಯ ನಾದೆಲ್ಲ   ಹೊಸ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಮತ್ತೊಂದು ಗುರುತರ  ಜವಾಬ್ದಾರಿ ನಿಭಾಯಿಸಲಿದ್ದಾರೆ. ಮೈಕ್ರೋಸಾಫ್ಟ್ ಕಾರ್ಪ್ ಬುಧವಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸತ್ಯ ನಾದೆಲ್ಲ  ಅವರನ್ನು ಹೊಸ ಅಧ್ಯಕ್ಷರಾಗಿ ನೇಮಿಸಿದೆ. ನಾದೆಲ್ಲ  ಅವರು 2014ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೀಗ ಜಗತ್ತಿನ ಮತ್ತೊಂದು ಆಯಕಟ್ಟಿನ  ಪ್ರಮುಖ ಹುದ್ದೆ ಜವಬ್ಬಾರಿ ನಿರ್ವಹಿಸಲಿದ್ದಾರೆ. ಇನ್ನು ಕಂಪನಿಯು ಮಾಜಿ ಅಧ್ಯಕ್ಷ ಜಾನ್ ಥಾಂಪ್ಸನ್ರನ್ನು ಪ್ರಮುಖ ಸ್ವತಂತ್ರ ನಿರ್ದೇಶಕರನ್ನಾಗಿ ಕಂಪನಿ ನೇಮಕ ಮಾಡಿದೆ. ಮೈಕ್ರೋಸಾಫ್ಟ್ ಈಗ ಸಿಇಒ ಮತ್ತು ಅಧ್ಯಕ್ಷ ಸತ್ಯ ನಾದೆಲ್ಲ  ಮೇಲ್ವಿಚಾರಣೆಯಲ್ಲಿ ನಡೆಯಲಿದೆ. 



ಸುದ್ದಿ ಓದಿ